ಬೆಂಗಳೂರು: ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆ ನೌಕರರ ಪದೋನ್ನತಿ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ಪದೋನ್ನತಿ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿ ಅವರ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆ ನೌಕರರ ಪದೋನ್ನತಿ ಸಂಬಂಧದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಪದೋನ್ನತಿ ವಿರುದ್ಧ ಕಂದಾಯ ಇಲಾಖೆ ನೌಕರರು ಕೆ.ಎ.ಟಿ ಮೊರೆ ಹೋಗಿದ್ದರು. ಕೆ.ಎ.ಟಿ ತನ್ನ ಅಂತಿಮ ಆದೇಶದಲ್ಲಿ ಅಂದಿನ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ತೀರ್ಮಾನಿಸಿದ ಪದೋನ್ನತಿ ಪ್ರಕ್ರಿಯೆಯನ್ನು ಎತ್ತಿ ಹಿಡಿದು ಆದೇಶ ನೀಡಿರುತ್ತದೆ ಎಂದು ಹೇಳಿದ್ದಾರೆ.
ಈ ವಿಷಯವನ್ನು ಮರೆ ಮಾಚಿ ತಮ್ಮ ತೇಜೋವಧೆ ಮಾಡಲು ಕೆಲವು ಸಂಘ ಹಾಗೂ ಸಂಘಟನೆಗಳು ಪಿತೂರಿ ನಡೆಸಿದ್ದು, ಅವರ ವಿರುದ್ಧ ಕಾನೂನಾತ್ಮಕವಾಗಿ ಮಾನನಷ್ಟ ಮೊಕದ್ದಮೆ ಹೂಡಲಿರುವುದಾಗಿ ಭೀಮಾಶಂಕರ್ ಹೇಳಿದ್ದಾರೆ.