ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗಬೇಡಿ

0
61

ಶಹಾಬಾದ: ಜನ್ಮ ಕೊಟ್ಟ ತಾಯಿ ತಂದೆ ಕಣ್ಣೆದುರೇ ಮಕ್ಕಳು ದುಶ್ಚಟಕ್ಕೆ ಬಲಿಯಾಗಿ ಮೃತಪಟ್ಟರೆ, ಆ ಕೊರಗು ಪೆÇೀಷಕರಿಗೆ ಜನ್ಮಪೂರ್ತಿ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗಬೇಡಿ ಎಂದು ಶಹಾಬಾದ ಡಿವಾಯ್‍ಎಸ್‍ಪಿ ಶಂಕರಗೌಡ ಪಾಟೀಲ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಅವರು ನಗರದ ಮರಗೋಳ ಕಾಲೇಜಿನಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮಧ್ಯಪಾನ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ . ತಂಬಾಕು, ಡ್ರಗ್ಸ್,ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳಿಗೆ ಬಲಿಯಾದರೆ ಜೀವನವೇ ಸರ್ವನಾಶವಾಗುತ್ತದೆ. ಇತ್ತೀಚಿನ ದಿನಗಳಲ್ಲಿ 17-18 ವರ್ಷದ ಯುವಕರು ವ್ಯಸನಕ್ಕೆ ತುತ್ತಾಗಿರುವುದು ನಿಜಕ್ಕೂ ದುರಂತ. ನಿಮ್ಮ ಗ್ರಾಮಗಳಲ್ಲಿ ಹಾಗೂ ನಿಮ್ಮ ಬಡಾವಣೆಗಳಲ್ಲಿ ಯಾರಾದರೂ ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡೋದು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ.ಅಲ್ಲದೇ ನಿಮ್ಮ ಮನೆಯಲ್ಲಿ ನಿಮ್ಮ ತಂದೆ,ಚಿಕ್ಕಪ್ಪ,ಅಣ್ಣ -ತಮ್ಮ ಯಾರಾದರೂ ಬೀಡಿ, ಸಿಗರೇಟ್, ಗುಟ್ಕಾ ತಿನ್ನುತ್ತಿದ್ದರೇ ಅವರ ಮನಸ್ಸಿಗೆ ನೋವಾದರೂ ಪರವಾಗಿಲ್ಲ ನೇರವಾಗಿ ಹೇಳಿ. ನಿಮ್ಮ ಈ ಚಟ ಇಡೀ ಕುಟುಂಬಕ್ಕೆ ಭಾರವಾಗಬಹುದು. ನಿಮ್ಮನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಕ್ಕೆ ಆಧಾರವಾಗಿರುವ ವ್ಯಕ್ತಿ ಮೃತಪಟ್ಟರೆ, ಆಗುವ ನಷ್ಟ ನಾವೆಲ್ಲ ಜೀವನಪೂರ್ತಿ ವ್ಯಥೆಪಡಬೇಕಾಗುತ್ತದೆ. ಮರದ ಬೇರು ಗಟ್ಟಿಯಾಗಿದ್ದರಷ್ಟೇ ಇಡೀ ಕುಟುಂಬ ಆರ್ಥಿಕವಾಗಿ, ಸಾಮಾಜಿಕವಾಗಿ, ಆರೋಗ್ಯಕರವಾಗಿರಲು ಸಾಧ್ಯ. ಕೆಟ್ಟ ಚಟಗಳನ್ನು ಬಿಟ್ಟುಬಿಡಿ ಎಂದು ತಿಳಿಹೇಳಿ ಚಟ ಬಿಡಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಿಐ ನಟರಾಜ ಲಾಡೆ ಮಾತನಾಡಿ, ಡ್ರಗ್ಸ್ ಸೇವನೆಯಂಥ ದುಶ್ಚಟವು ವ್ಯಕ್ತಿಯ ಕೌಟುಂಬಿಕ ಮತ್ತು ಸಾಮಾಜಿಕ ವಲಯಗಳಲ್ಲೂ ಮಾರಕ ಪರಿಣಾಮ ಬೀರುತ್ತದೆ. ಪ್ರಾರಂಭದಲ್ಲೇ ದುಶ್ಚಟಗಳಿಂದಾಗುವ ಹಾನಿಗಳ ಬಗ್ಗೆ ಎಚ್ಚರವಹಿಸಬೇಕು. ನಶಾ ಮುಕ್ತ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯುವಜನತೆ ಬೆನ್ನೆಲು ಬಾಗಿ ನಿಲ್ಲಬೇಕು. ನಶಾ ಮುಕ್ತ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರಗೋಳ ಕಾಲೇಜಿನ ಪ್ರಾಂಶುಪಾಲ ಪ್ರೋ. ಕೆ.ಬಿ.ಬಿಲ್ಲವ್ ಮಾತನಾಡಿ, ಇಂದಿನ ಯುವ ಪೀಳಿಗೆಯು ಎಲ್ಲೆಂದರಲ್ಲಿ ಲಭ್ಯವಿರುವ ವಿವಿಧ ಬಗೆಯ ಮಾದಕ ದ್ರವ್ಯಗಳಿಂದ ತಮ್ಮನ್ನು ತಾವು ದೂರವಿರಿಸಿಕೊಳ್ಳುವಲ್ಲಿ ಇಂಥ ಅರಿವು ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.

ವೈದ್ಯಾಧಿಕಾರಿ ಶಂಕರ ರಾಠೋಡ,ಪಿಎಸ್‍ಐ ಚಂದ್ರಕಾಂತ ಮೆಕಾಲೆ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಮಾದವ ಮಾದಕ ವ್ಯಸನಕ್ಕೆ ಬಲಿಯಾಗುವುದಿಲ್ಲ.ನಾನು ದುಶ್ಚಟಗಳಿಗೆ ದಾಸನಾಗುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here