ಪರಿಹಾರ ವಿತರಿಸುವಂತೆ ಶಾಸಕರಿಂದ ಮನವಿ

0
11

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಹಾನಿಯುಂಟಾಗಿದ್ದು, ಕೂಡಲೇ ಪರಿಹಾರ ವಿತರಿಸಬೇಕೆಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ರಾಜ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಬೇಟಿ ಮಾಡಿ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಸವಕಲ್ಯಾಣದ ಅಟ್ಟೂರ ಕೆರೆ ಒಡೆದು ಕಲಬುರಗಿ ಜಿಲ್ಲೆಯ ಸನಗುಂದಾ, ಬೆಳಮಗಿ, ಸಾವಳಗಿ, ಕರಹರಿ, ಕಮಲಾನಗರ, ಬೆಟ್ಟ ಜೇವರ್ಗಿ, ವಾಗ್ದರ್ಗಿ, ಕಮಲಾನಗರ, ಬೋಧನ್, ವಿ.ಕೆ.ಸಲಗರ, ಲೇಂಗಟಿ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಮಣ್ಣು ಕೊಚ್ಚಿಕೊಂಡು ಹೋಗಿದೆ.ಬೆಳೆಗಳು ಹಾನಿಯಾಗಿವೆ. ಕೊಳವೆ, ತೆರೆದ ಬಾವಿಗಳು ನೀರಿನಿಂದ ಹಾನಿಗೀಡಾಗಿವೆ. ಕೂಡಲೇ ಪರಿಹಾರ ವಿತರಿಸಬೇಕು ಎಂದು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here