ಸುರಪುರ: ತಾಲುಕಿನ ನಾಗರಾಳ ಗ್ರಾಮದ ಬಳಿಯ ಹಳ್ಳಕ್ಕೆ ನಿರ್ಮಿಸಲಾಗಿರುವ ಹೈಡ್ರೋ ಪವರ್ ಕಿರು ವಿದ್ಯುತ್ ಉತ್ಪಾದನಾ ಘಟಕದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಪರಿಹಾರ ಕೊಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡ ರಮೇಶ ದೊರೆ ಆಲ್ದಾಳ ಒತ್ತಾಯಿಸಿದರು.
ನಗರದ ತಹಸಿಲ್ದಾರ್ ಕಚೇರಿಯಲ್ಲಿ ತಹಸಿಲ್ದಾರ್‍ಗೆ ಮನವಿ ಸಲ್ಲಿಸಿ ಮಾತನಾಡಿ,ಆಲ್ದಾಳ ಗ್ರಾಮದ ರೈತ ಚಂದಣ್ಣ ನಾಯಕ ಹಾಗೂ ಕಿಷ್ಟಣ್ಣ ನಾಯಕ ಇವರ ಸರ್ವೇ ನಂಬರ್ 129 ಮತ್ತು 130 ರಲ್ಲಿನ ಒಟ್ಟು 3 ಎಕರೆ 21 ಗುಂಟೆ ಜಮೀನು ಕಿರು ವಿದ್ಯುತ್ ಉತ್ಪಾದನಾ ಘಟಕ ಹಳ್ಳಕ್ಕೆ ನಿರ್ಮಿಸಿರುವ ತಡೆಗೋಡೆ ಯಿಂದ ಹಿನ್ನೀರು ನಿಲ್ಲುವುದರಿಂದ ಮುಳುಗಡೆಯಾಗಿದೆ,ಇದೇ ರೀತಿ ಬೇರೆ ರೈತರ ಜಮೀನು ಮುಳುಗಡೆಯಾದರೆ ಪ್ರತಿ ವರ್ಷ ಎಕರೆಗೆ 40 ಸಾವಿರ ಲೀಜ್ ಹಣ ಕೊಡುತ್ತಾರೆ,ಆದರೆ ರೈತ ಚಂದಣ್ಣ ನಾಯಕ ಮತ್ತು ಕಿಷ್ಟಣ್ಣ ನಾಯಕ ಇವರಿಗೆ ಇದುವರೆಗೂ ನಯಾ ಪೈಸೆ ನೀಡಿಲ್ಲ,ಆದ್ದರಿಂದ ಕೂಡಲೇ ಈ ರೈತರಿಗೆ ಲೀಸ್ ಹಣ ನೀಡಬೇಕು,ಇಲ್ಲವಾದಲ್ಲಿ ರೈತರೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಅಲ್ಲದೆ ಹೈಡ್ರೋ ಪವರ್ ಕಂಪನಿ ಹಳ್ಳಕ್ಕೆ ಕಟ್ಟಿಸಿರುವ ಗೇಟ್ ಹಾಕಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ಕಿಲ್ಲೆದಾರ್,ಪ್ರಧಾನೆಪ್ಪ ಸಕ್ರೇಪುರ,ಜಮೀನಿನ ಮಾಲೀಕ ರಂಗಪ್ಪ ನಾಯಕ ಜಾಗಿರದಾರ ಇದ್ದರು.
ಹೈಡ್ರೋ ಪವರ್ ಕಿರು ವಿದ್ಯುತ್ ಘಕದ ಹಿನ್ನೀರು ನಿಲ್ಲುವ ಸ್ಥಳಕ್ಕೆ ಕಕ್ಖೇರಾ ಕಂದಾಯ ನಿರೀಕ್ಷ ಮಲ್ಲಿಕಾರ್ಜುನ, ಗ್ರಾಮ ಲೆಕ್ಕಾಧಿಕಾರಿ ತೇಜಸ್ವಿನಿ ಅವರು ಭೇಟಿ ನೀಡಿ ಜಮೀನು ಮುಳುಗಡೆಯ ವೀಕ್ಷಿಸಿದರು ಅಲ್ಲದೆ ತಹಸಿಲ್ದಾರರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.