ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ: ಶಿಕ್ಷಕರಿಂದ ದೇಶಕಟ್ಟುವ ಕಾರ್ಯ ನಿರಂತರವಾಗಿ ಜರುಗಲಿ 

0
41

ಕಲಬುರಗಿ: ಸಮಾಜದಲ್ಲಿ ಶಿಕ್ಷಕರು ಗುರುವಿನ ಸ್ಥಾನದಲ್ಲಿದ್ದು, ತಮ್ಮ ಪವಿತ್ರ ಬೋಧನಾ ಸೇವೆಯ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೂ ಗುರುವಾಗಬೇಕು. ಕರ್ತವ್ಯ ಪ್ರಜ್ಞೆಯಿಂದ ಸೇವೆಯನ್ನು ಸಲ್ಲಿಸುವ ಮೂಲಕ ದೇಶ ಕಟ್ಟುವ ಕಾರ್ಯ ಶಿಕ್ಷಕರಿಂದ ನಿರಂತರವಾಗಿ ಜರುಗಬೇಕಾಗಿದೆಯೆಂದು ರಾಜ್ಯ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಷ್ಕೃತ ಸಹ ಶಿಕ್ಷಕ ಚಂದ್ರಶೇಖರ ಪಾಟೀಲ ಹೇಳಿದರು.

ಅವರು ನಗರದ ಆಳಂದ ರಸ್ತೆಯ, ದೇವಿನಗರದಲ್ಲಿರುವ ’ಎಮ್.ಎಮ್.ಎನ್ ಶಾಲೆ’ಯಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಸಾಧಕರಿಗೆ ಸತ್ಕಾರ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ನಂತರ ಮಾತನಾಡುತ್ತಿದ್ದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಬಿರಾದಾರ ಮಾತನಾಡಿ, ವ್ಯಕ್ತಿಗೆ ದೊರೆಯುವ ಸದಾವಕಾಶಗಳನ್ನು ಸಮಾಜದ ಒಳಿಗಾಗಿ ವಿನಿಯೋಗಿಸಬೇಕು. ಪ್ರಶಸ್ತಿಗಾಗಿ ಕಾರ್ಯ ಮಾಡದೆ, ನಮ್ಮ ಸೇವೆಯೆ ಪ್ರಶಸ್ತಿಯಾಗಬೇಕೆಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡಿ, ಸದಾ ಸಮಾಜಕ್ಕೆ ದುಡಿಯುವ ಮನ ನಮ್ಮದಾಗಬೇಕು. ಅಂತಹ ಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿರುವ ಬಳಗದ ಕಾರ್ಯ ಶ್ಲಾಘನೀಯವಾಗಿದೆಯೆಂದರು.

ಕಾರ್ಯಕ್ರಮದಲ್ಲಿ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ವೀರೇಶ ಬೋಳಶೆಟ್ಟಿ, ಶಿವಚಿiಸ್ವಾಮಿ ಮಠಪತಿ, ಕೆ.ಬಸವರಾಜ, ಚಂದ್ರಕಾಂತ ತಳವಾರ, ಸೂರ್ಯಕಾಂತ ಸಾವಳಗಿ, ಚನ್ನಯ್ಯ ಸ್ವಾಮಿ, ರೇಣುಕಾಚಾರ್ಯ ಸ್ಥಾವರಮಠ, ಅಣ್ಣಾರಾವ ಮಂಗಾಣೆ, ರಾಜಕುಮಾರ ಬಟಗೇರಿ, ನಾಗೇಂದ್ರಪ್ಪ ಕಲಶೆಟ್ಟಿ, ಅಮರ ಬಂಗರಗಿ, ಡಿ.ಬಿ.ಕುಲಕರ್ಣಿ, ಪ್ರದೀಪ ಕುಂಬಾರ, ನಿಂಗರಾಜ ವಾಲಿ, ಸಂತೋಷ ಹೂಗಾರ, ಹಣಮಂತರಾಯ ದಿಂಡೂರೆ, ಗಜಾನಂದ ಕುಂಬಾರ, ಶ್ರೀಶೈಲ ನಾಗಶೆಟ್ಟಿ, ಬಸವರಾಜ ಹೆಳವರ, ರವೀಚಿದ್ರ ಗುತ್ತೇದಾರ, ಮಲ್ಲಿನಾಥ ಮುನ್ನೋಳಿ, ಮಲಕಾರಿ ಪೂಜಾರಿ ಸ್ಭೆರಿದಂತೆ ಅನೇಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಮಹಾದೇವ ಹಿರೇಮಠ ಪ್ರಾರ್ಥಿಸಿದರು. ನರಸಪ್ಪ ಬಿರಾದಾರ ದೇಗಾಂವ ಸ್ವಾಗತಿಸಿದರು. ಶಿವಕಾಂತ ಚಿಮ್ಮಾ ನಿರೂಪಣೆ ಮಾಡಿದರು. ಪ್ರಭುಲಿಂಗ ಮೂಲಗೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here