33ನೇ ವರ್ಷದ ನಾಡಹಬ್ಬ ಉತ್ಸವಕ್ಕೆ ಚಾಲನೆ: ಕಣ್ಮನ ಸೆಳೆದ ಸ್ಥಬ್ಧಚಿತ್ರಗಳ ಮೆರವಣಿಗೆ

0
20

ಸುರಪುರ: ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ದಸರಾಹಬ್ಬದ ಪ್ರಯುಕ್ತ ನಾಡಹಬ್ಬ ಉತ್ಸವ ಸಮಿತಿಯ ವತಿಯಿಂದ ವಿವಿಧ ಶಾಲೆಗಳ ಮಕ್ಕಳಿಂದ ಆಯೋಜಿಸಿದ್ದ ಸ್ಥಬ್ದಚಿತ್ರಿಗಳ ಮೆರವಣಿಗೆಗೆ ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಚಾಲನೆ ನೀಡಿದರು.

ನಾಡಹಬ್ಬ ಉತ್ಸವ ಸಮಿತಿಯು ಕಳೆದ ೩೩ ವರ್ಷಗಳಿಂದ ಸತತವಾಗಿ ದಸರಾ ಹಬ್ಬದ ಪ್ರಯುಕ್ತ ಸ್ಥಬ್ದಚಿತ್ರ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದು,ಅದರಂತೆ ಮೇರವಣಿಗೆಯಲ್ಲಿ ಈ ವರ್ಷವುಕೂಡಾ ನಗರದ ವಿವಿಧ ಶಾಲೆಯ ಮಕ್ಕಳು ಛದ್ಮವೇಶಗಳನ್ನು ಪ್ರದರ್ಶಿಸುತ್ತಾ ನಮ್ಮ ಸಂಸ್ಕೃತಿ ಹಾಗೂ ಕಲೆ, ವಿಜ್ಞಾನ, ಸಾಮಾಜಿಕ ಸುಧಾರಕರ ವೇಷಗಳನ್ನು ಧರಿಸಿ ನೋಡುಗರ ಗಮನಸೇಳದವು.
ವಿಶೇಷತೆ: ಸರ್ಕಾರಿ ಪ್ರಾಥಮಿಕ ಶಾಲೆ ಖುರೇಷಿ ಮೊಹ್ಹಲಾದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಚಂದ್ರಯಾನ ೨ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ವಿಜ್ಞಾನಿ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಛದ್ಮವೇಷ ಧರಿಸಿದ್ದರು.

Contact Your\'s Advertisement; 9902492681

ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿ ಸಾಕಷ್ಟು ನಷ್ಟವಾಗಿದ್ದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಉದ್ದೇಶದಿಂದ ರಾಜಾ ಹರ್ಷವರ್ಧನ ನಾಯಕ ಅಭಿಮಾನಿ ಸಂಘದ ವತಿಯಿಂದ ನಿರ್ಮಿಸಲಾದ ಪ್ರವಾಹದಿಂದ ಸಂಕಷ್ಟದಲ್ಲಿರುವ ರೈತನ ಛದ್ಮವೇಶ ಧರಿಸಿ ನೋಡಗರಲ್ಲಿ ಬೆರಗು ಮೂಡಿಸಿತು.

ಇನ್ನು ರಾಣಿ ಜಾನಕಿದೇವಿ ಶಾಲೆ, ದರಬಾರ ಕನ್ಯಾಮಾದರಿ ಶಾಲೆ, ಆನಂದ ವಿದ್ಯಾಲಯ, ಸರ್ವೊದಯ ಶಾಲೆ, ಸನ್ ಶೈನ ಶಾಲೆಯಿಂದ ೧೦ ಕ್ಕೂ ಹೆಚ್ಚು ದಾರ್ಶನಿಕರು, ಹಾಗೂ ಇತಿಹಾಸ ಪುರುಷರ ಸ್ಥಬ್ದಚಿತ್ರಗಳ ಮೆರವಣಿಗೆಯೂ ನಗರದ ಪ್ರಮುಖ ಬೀದಿಗಳ ಮೂಲಕ ಗರುಡಾದ್ರಿ ಕಲಾ ಮಂದಿರಕ್ಕೆ ಬಂದು ನಂತರ ನಾಡದೇವಿ ಬಾವಚಿತ್ರ ಕೂಡಿಸುವ ಮೂಲಕ ಮೆರವಣಿಗೆ ಸಮಾರೋಪಗೊಳಿಸಲಾಯಿತು.ಮೆರವಣಿಗೆಯಲ್ಲಿ ಬಸವರಾಜಪ್ಪ ನಿಷ್ಠ ದೇಶಮುಖ,ಬಸವರಾಜ ಜಮದ್ರಖಾನಿ,ಛಾಯಾ ಮನೋಹರ ಕುಂಟೋಜಿ,ಲಕ್ಷ್ಮಣ ಗುತ್ತೇದಾರ,ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ,ರಾಜಶೇಖರ ದೇಸಾಯಿ,ಮಹೇಶ ಜಹಾಗಿರದಾರ,ಸಂಪತ್ ಗುಡೂರ, ನಿಂಗಣ್ಣ ಕಲ್ಲೂರಮಠ,ದೇವು ಹೆಬ್ಬಾಳ,ಶ್ರೀಶೈಲ ಯಂಕಂಚಿ,ಧೀರೆಂದ್ರ ಕುಲಕರ್ಣಿ,ಶ್ಯಾಮುವೆಲ್,ಅಪ್ಪಣ್ಣ ಹೆಮನೂರ, ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here