ರಂಗಂಪೇಟ ಕನ್ನಡ ಸಾಹಿತ್ಯ ಸಂಘದಲ್ಲಿ ಅದ್ಧೂರಿ ೭೭ನೇ ನಾಡಹಬ್ಬ ಆಚರಣೆ

0
29

ಸುರಪುರ: ರಂಗಂಪೇಟಯ ರಾಮಣ್ಣ ಬೋಡಾ ಸ್ಮಾರಕ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ೭೭ನೇ ನಾಡಹಬ್ಬ ಸೆ ೩೦ರಿಂದ ಅ. ೪ರವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಾ. ಸುರೇಶ್ ಸಜ್ಜನ್ ತಿಳಿಸಿದರು.

ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ ಕನ್ನಡ ಧ್ವಜಾರೋಹಣ, ೮ ಗಂಟೆಗೆ ನಾಡದೇವಿ ಪ್ರತಿಷ್ಠಾಪನೆ, ಪೂಜೆ ಪ್ರಸಾದ ವಿನಿಯೋಗ, ನಿತ್ಯ ಸಂಜೆ ವಿದ್ವಾಂಸರಿಂದ ವಿವಿಧ ವಿಷಯಗಳ ಮೇಲೆ ಉಪನ್ಯಾಸ ಮಾಲಿಕೆ ಏರ್ಪಡಿಸಲಾಗಿದೆ ಎಂದರು. ೩೦ರಂದು ಶಾಸಕ ನರಸಿಂಹನಾಯಕ ರಾಜೂಗೌಡ ಉದ್ಘಾಟನೆ, ಸಂಘದ ಅಧ್ಯಕ್ಷ ಡಾ. ಸುರೇಶ್ ಸಜ್ಜನ್ ಅಧ್ಯಕ್ಷತೆ ವಹಿಸುವರು. ಭಾರತದ ಪ್ರಸಿದ್ಧ ಕ್ಯಾನ್ಸರ್ ತಜ್ಞ ಮಾಜಿದ್ ಅಹಮದ್ ತಾಳಿಕೋಟಿ ಅವರಿಂದ ಕ್ಯಾನ್ಸರ್ ರೋಗದ ಕುರಿತು ಉಪನ್ಯಾಸ, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಯಲ್ಲಪ್ಪ ಕಾಡ್ಲೂರ್ ಉಪಸ್ಥಿತಿ, ನಿವೃತ್ತ ಶಿಕ್ಷಕ ಜಿಲ್ಲಾ ರಾಜ್ಯಪ್ರಶಸ್ತಿ ವಿಜೇತ ಶಾಂತಪ್ಪ ಬೂದಿಹಾಳ ಅವರಿಗೆ ಸನ್ಮಾನ ನಡೆಯಲದೆ ಎಂದು ತಿಳಿಸಿದರು.

Contact Your\'s Advertisement; 9902492681

ಅ. ೧ರಂದು ಸೋಮರಾಯ ಶಖಾಪುರ ಅಧ್ಯಕ್ಷತೆ, ಮುದ್ನೂರುಪ್ರೌಢಶಾಲೆ ಮುಖ್ಯಶಿಕ್ಷಕ ಗುರುಬಸಪ್ಪ ಅಪ್ಪಾಗೋಳ ಉಪನ್ಯಾಸ, ನಿವೃತ್ತ ಶಿಕ್ಷಕ ಕಿಸನ್‌ರಾವ್ ಕಾಟೆ ಸನ್ಮಾನ, ೨ರಂದು ಸುಭಾಷ್ ಬೋಡಾ ಅಧ್ಯಕ್ಷತೆ, ಮಾನ್ವಿಯ ಕಾಲೇಜಿನ ಉಪನ್ಯಾಸಕ ಗಿರಿಧರ ಪೂಜಾರಿ ಅವರಿಂದ ಶಿಕ್ಷಣ ಮತ್ತು ಸಂಸ್ಕಾರ ಕುರಿತು ಉಪನ್ಯಾಸ, ಪ್ರಥಮದರ್ಜೆ ಗುತ್ತೇದಾರ ಪ್ರಕಾಶ್ ಸಜ್ಜನ್ ಉಪಸ್ಥಿತಿ, ತೂಕ ಮತ್ತು ಅಳತೆ ಇಲಾಖೆ ಉಪನಿರ್ದೇಶಕ ಬಾಬರಾವ್ ಡೊಳ್ಳೆ ಅವರಿಗೆ ಸನ್ಮಾನ. ೩ರಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗರೇಶ್ ವಾರದ ಅಧ್ಯಕ್ಷತೆ, ಚಿತ್ತಾಪುರದ ನರಸಿಂಹಪ್ಪ ಚಿನ್ನಾಕಟ್ಟೆಯವರಿಂದ ಸಗರನಾಡಿನ ಶರಣ-ಸೂಫಿ-ಸಂತರ ಕುರಿತು ಉಪನ್ಯಾಸ, ೪ರಂದು ಉಪನ್ಯಾಸಕ ಚಂದ್ರಶೇಖರ ಅನಾದಿ ಅಧ್ಯಕ್ಷತೆ, ಸಾಹಿತಿ ಗುರುಪ್ರಸಾದ್ ವೈದ್ಯ ಅವರಿಂದ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ, ಉಪನ್ಯಾಸಕ ಶಿವಶಂಕರ ವಿಭೂತೆ ಉಪಸ್ಥಿತಿ, ರುಕ್ಮಾಪುರದ ಕೀರಪ್ಪ ಬಡಗಾ ದಂಪತಿಗೆ ಸನ್ಮಾನ ನಡೆಯಲಿದೆ. ನಂತರ ವಿವಿಧ ಸ್ಪರ್ಧಾ ವಿಜೇತರಿಗೆ ಪಾರಿತೋಷಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ನಾಗಣ್ಣ ತ್ರಿವೇದಿ, ಪ್ರಮುಖರಾದ ಶಾಂತಪ್ಪ ಬೂದಿಹಾಳ, ಸೋಮಶೇಖರ ಶಾಬಾದಿ, ಜಿ. ಭೀಮಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here