ಬೆಂಗಳೂರು: ವಕ್ಫ್ ಕಾಯ್ದೆ, 1995ರ ಕಾಯ್ದೆ 14(2) & (3) ಹಾಗೂ ವಕ್ಫ್ (ತಿದ್ದುಪಡಿ) ಕಾಯ್ದೆ 2013ರಂತೆ (27 oಜಿ 2013) ರಂತೆ, ಕರ್ನಾಟಕ ರಾಜ್ಯದ ಲೋಕಸಭೆ/ರಾಜ್ಯಸಭೆಯ ಮುಸ್ಲಿಂ ಸದಸ್ಯರುಗಳು, ಕರ್ನಾಟಕ ವಿಧಾನ ಸಭೆ/ವಿಧಾನ ಪರಿಷತ್‍ನ ಮುಸ್ಲಿಂ ಸದಸ್ಯರುಗಳು, ಕರ್ನಾಟಕ ಬಾರ್ ಕೌನ್ಸಿಲ್‍ನ ಮುಸ್ಲಿಂ ಸದಸ್ಯರುಗಳು, ರೂ. ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ವಕ್ಸ್ ಮುತವಲ್ಲಿಗಳು, ಕರ್ನಾಟಕ ರಾಜ್ಯದ ಲೋಕಸಭೆ/ರಾಜ್ಯಸಭೆಯ ಮುಸ್ಲಿಂ ಮಾಜಿ ಸದಸ್ಯರುಗಳು, ಕರ್ನಾಟಕ ವಿಧಾನ ಸಭೆ/ವಿಧಾನ ಪರಿಷತ್‍ನ ಮುಸ್ಲಿಂ ಮಾಜಿ ಸದಸ್ಯರುಗಳು, ಕರ್ನಾಟಕ ಬಾರ್ ಕೌನ್ಸಿಲ್‍ನ ಮುಸ್ಲಿಂ ಮಾಜಿ ಸದಸ್ಯರುಗಳು ಮತಕ್ಷೇತ್ರಗಳಿಗೆ ಅರ್ಹ ವ್ಯಕ್ತಿಗಳು ತಮ್ಮನ್ನು ಮತದಾರರಾಗಿ ನೊಂದಾಯಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನವಾಗಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 3 ರಂದು ಪ್ರಕಟಿಸಲಾಗುವುದು. ಹಕ್ಕು ಅಥವಾ ಆಕ್ಷೇಪಣೆಗಳನ್ನು ಆಗಸ್ಟ್ 3 ರಿಂದ ಆಗಸ್ಟ್ 17 ರವರೆಗೆ ಸಲ್ಲಿಸಬಹುದು.
ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 6 ರಂದು ಪ್ರಕಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಚುನಾವಣೆಯ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.