ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಡೆಂಗಿ ಲಾರ್ವ ಉತ್ಪತ್ತಿಗಳ ನಾಶಕ್ಕೆ ಚಾಲನೆ

0
16

ಅಫಜಲಪುರ: ಗೊಬ್ಬೂರು ವ್ಯಾಪ್ತಿಯ ಬಂದರವಾಡ ಗ್ರಾಮ ಪಂಚಾಯಿತಿಯಲ್ಲಿ ಮಾನ್ಯ ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಆದೇಶದ ಅನ್ವಯ ವಾರಕ್ಕೆ ಒಂದು ಸಲ ಅಂದರೆ ಪ್ರತಿ ಶುಕ್ರವಾರ ಲಾರ್ವ ಸಮೀಕ್ಷೆ ದಿನಾಚರಣೆಯನ್ನು ಕೈಗೊಳ್ಳಲು ಸೂಚಿಸಿದ್ದು ಅದರಂತೆ ಶ್ರೀಮತಿ ವಿಮಲಾಭಾಯಿ ಗೋಲಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪೋಸ್ಟರ್, ಪ್ರದರ್ಶಿಸುವ ಮೂಲಕ ಪಂಚಾಯಿತಿ ಆವರಣದಲ್ಲಿ ಉದ್ಘಾಟಿಸಿದರು.

ತರುವಾಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಶಿಧರ್ ಬಳೆ ಡೆಂಗಿ ನಿಯಂತ್ರಣದಲ್ಲಿ ಲಾರ್ವ ಉತ್ಪತ್ತಿಗಳ ನಾಶ ಮಾಡುವ ಕುರಿತು ಮಾತನಾಡುತ್ತಾ ಸೊಳ್ಳೆಗಳ ಉತ್ಪತ್ತಿಯಾಗದಂತೆ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ತಮ್ಮ ಗ್ರಾಮವನ್ನು ಸ್ವಚ್ಛವಾಗಿರಿಸಿಕೊಂಡು ಹೋಗಲು ತಮ್ಮ ಮನೆ ಮನೆಗೆ ಆಶಾ ಕಾರ್ಯಕರ್ತರು ಇನ್ನು ಮುಂದೆ ಪ್ರತಿ ಶುಕ್ರವಾರ ತಮ್ಮ ಗ್ರಾಮದಲ್ಲಿ ಬಂದು ಲಾರ್ವ ಸಮೀಕ್ಷೆ ಕೈಗೊಂಡಾಗ ಅವರಿಗೆ ಸಹಕರಿಸಿದಲ್ಲಿ ಡೆಂಗಿ ನಿಯಂತ್ರಣ ಸಾಧ್ಯ. ಈ ಸಾಲಿನ ಪ್ರಸ್ತುತ ಘೋಷ ವಾಕ್ಯದಂತೆ ಸಮುದಾಯ ಸಹಕಾರದಿಂದ ಮಾತ್ರ ಡೆಂಗಿ ನಿಯಂತ್ರಣ ಸಾಧ್ಯ ಎಂದು ತಿಳಿಸಿದರು.

Contact Your\'s Advertisement; 9902492681

ಇಡೀ ಸ್ಈಜಿಪ್ಟೀಸೊಳ್ಳೆ ಶುದ್ಧವಾದ ನೀರಿನಲ್ಲಿ ತನ್ನ ಸಂತತಿಯನ್ನು ಉತ್ಪತ್ತಿ ಮಾಡುತ್ತದೆ ಅದಕ್ಕೆ ತಮ್ಮ ಮನೆಯಲ್ಲಿ ಸಂಗ್ರಹಿಸಿದ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಹತ್ತು ನಿಮಿಷ ಒಣಗಿಸಿ ತದನಂತರ ಪುನಃ ನೀರು ಸಂಗ್ರಹಿಸಿದಲ್ಲಿ ಸೊಳ್ಳೆಗಳ ಉತ್ಪತ್ತಿಯ ನಾಶಕ್ಕೆ ಒಳ್ಳೆಯ ಮಾರ್ಗವಾಗಿದೆ. ಅಲ್ಲದೆ ತಮ್ಮ ಮನೆಯಲ್ಲಿ ಘನತ್ಯಾಜ್ಯ ವಸ್ತುಗಳಾದ ಬಿಸಾಡಿದ ಟೈರು, ಪ್ಲಾಸ್ಟಿಕ್ ಬಾಟಲ್, ತೆಂಗಿನ ಎಳೆನೀರಿನ ಚಿಪ್ಪು, ಒಡೆದ ಮಡಿಕೆ , ಇವುಗಳಲ್ಲಿ ಸೊಳ್ಳೆಗಳ ಉತ್ಪತ್ತಿಗೆ ತಾಣಗಳಾಗಿವೆ. ಅವುಗಳನ್ನು ತಮ್ಮ ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲು ಇರದಂತೆ ಕಾಪಾಡಿಕೊಳ್ಳಿ, ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಎಂದು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಸಿಬ್ಬಂದಿಗಳು, ಆಯುಷ್ಮಾನ್ ಮಂದಿರದ ಸಿಬ್ಬಂದಿಗಳಾದ ಸಮುದಾಯ ಆರೋಗ್ಯ ಅಧಿಕಾರಿ ಭುವನೇಶ್ವರಿ, ಪ್ರಾಥಮಿಕ ಆರೋಗ್ಯ ಕಾಳಜಿ ಅಧಿಕಾರಿ ರಾಜೇಶ್ವರಿ, ಆಶಾ ಕಾರ್ಯಕರ್ತರಾದ ಭಾಗ್ಯಶ್ರೀ, ಪಾರ್ವತಿ, ಮರಿಯಮ್ಮ, ಅಂಬುಬಾಯಿ, ರೂಪ , ಹಾಜರಿದ್ದರು, ತದನಂತರ ಗ್ರಾಮದಲ್ಲಿ ಲಾರ್ವ ಸಮೀಕ್ಷೆ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಆಶಾ ಕಾರ್ಯಕರ್ತರು ಸಿಬ್ಬಂದಿಯೊಡನೆ ಜೊತೆಗೂಡಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here