ಸುರಪುರ:ಕರ್ನಾಟಕ ರಂಗಕ್ಷೇತ್ರಕ್ಕೆ ಹಿರಿಯ ನಾಟಕಕಾರರಾಗಿದ್ದ ಸಿ.ಜಿ.ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ಪಟ್ಟಣದ ರಂಗಂಪೇಟೆಯ ಖಾದಿ ಕೇಂದ್ರ ಆವರಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಬೀದಿ ರಂಗ ದಿನಾಚರಣೆ ಹಾಗೂ ಸಿ.ಜಿ.ಕೆ ಪ್ರಶಸ್ತಿ 2024 ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತ ರಂಗ ಸಂಘಟಕರನ್ನು ಒಂದುಗೂಡಿಸಿದ ಸಿ.ಜಿ.ಕೆ ಯವರು ಕರ್ನಾಟಕ ನಾಟಕ ಅಕಾಡೆಮಿ ಅದ್ಯಕ್ಷರಾಗಿ ಮಹತ್ತರ ಕಾರ್ಯಾನಿರ್ವಹಿಸಿದ್ದಾರೆ ಎಂದು ಹೇಳಿದರು.
ಪ್ರತಿ ವರ್ಷ ಸಗರನಾಡು ಸೇವಾ ಪ್ರತಿಷ್ಠಾನದ ಮೂಲಕ ಸಿ.ಜಿ.ಕೆ ಅವರ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸುತ್ತಾ ಬರುತ್ತಿದ್ದು, ಇದುವರೆಗೂ ಒಟ್ಟು 8 ಜನ ನಾಟಕಕಾರರಿಗೆ ಪ್ರಶಸ್ತಿ ನೀಡಿದ್ದು, ಎಲ್.ಬಿ.ಕೆ ಆಲ್ದಾಳ, ಮಲ್ಲೇಶಿ ಕೋನ್ಹಾಳ, ಹೊನ್ನಪ್ಪ ಚನ್ನುರು, ಶರಣಪ್ಪ ಹಾಲಭಾವಿ, ಬಲಭೀಮ ನಾಯಕ ಬೈರಿಮಡ್ಡಿ, ಬಸವರಾಜ ಪಂಚಗಲ್ ಕೋಡೆಕಲ್, ಮಹಾಂತಯ್ಯ ಸ್ವಾಮಿ ಹಿರೇಮಠ ಅವರಿಗೆ ನೀಡಿದ್ದು ಈ ವರ್ಷದ ಪ್ರಶಸ್ತಿಯನ್ನು ರಂಗ ಸಂಘಟಕರು ಹಾಗೂ ಹಿರಿಯ ನಾಟಕಕಾರರಾದ ಲಿಂಗಣ್ಣ ಸಾಹುಕಾರ ತಡಿಬಿಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೆವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಟಕಕಾರ ಲಿಂಗಣ್ಣ ಸಾಹುಕಾರ ತಡಿಬಿಡಿ ಅವರಿಗೆ ಸಿಜಿಕೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ, ಉಪಪ್ರಾಚಾರ್ಯ ಬಲಭೀಮ ಪಾಟೀಲ, ಹಿರಿಯ ಮುಖಂಡರಾದ ಶಿವಶರಣಪ್ಪ ಹೆಡಿಗಿನಾಳ, ಸಂಘಟಕ ಶ್ರೀಕಾಂತ ರತ್ತಾಳ, ಕಲಾವಿಧರಾದ ಸಿದ್ಧಣ್ಣ ಹದನೂರ, ರುದ್ರಪ್ಪ ಕೆಂಭಾವಿ ವೇದಿಕೆಮೇಲಿದ್ದರು. ಕಾರ್ಯಕ್ರಮವನ್ನು ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಅಮರೇಶ ಮುಷ್ಠಳ್ಳಿ ಸ್ವಾಗತಿಸಿದರು, ಮೇಘಾ ದಾಯಿಪುಲೆ ವಂದಿಸಿದರು.