ಸುರಪುರ:ಪಟ್ಟಣದ ಉಪ ಕಾರಾಗೃಹಕ್ಕೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ ಕಾರಾಗೃಹಕ್ಕೆ ಆಗಮಿಸಿದ ನ್ಯಾಯಾಧೀಶರು ಕೈದಿಗಳಿಗೆ ಭೇಟಿ ನೀಡಿ ಕಾರಾಗೃಹದಲ್ಲಿ ನೀಡುತ್ತಿರುವ ಉಪಹಾರ,ಆಹಾರದ ಕುರಿತು ಮಾಹಿತಿ ಪಡೆದರು.ಅಲ್ಲದೆ ಇದೇ ಸಂದರ್ಭದಲ್ಲಿ ಉಪ ಕಾರಾಗೃಹದಲ್ಲಿ ತಯಾರಿಸಲಾಗಿದ್ದ ಉಪಹಾರವನ್ನು ಪರಿಶೀಲಿಸಿದರು.
ಕಾರಾಗೃಹದಲ್ಲಿ ಕೈಗೊಂಡಿರುವ ಸ್ವಚ್ಛತೆಯ ಪರಿಶೀಲನೆ ಮಾಡಿದರು,ಅಲ್ಲದೆ ಕಾರಾಗೃಹದ ಸುತ್ತಲು ಪರಿಸಿರ ಸ್ವಚ್ಛತೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಸಮೀರ್ ಹಾಗೂ ಕಾರಾಗೃಹದ ಸಿಬ್ಬಂದಿಗಳು ಇದ್ದರು.