ಕಲಬುರಗಿ: ಹಾವೇರಿಜಿಲ್ಲೆಯ ಅಬಲೂರು ಎಂಬ ಗ್ರಾಮ ಪ್ರಸಿದ್ಧವಾಗಿರುವುದು ಕವಿ ಸರ್ವಜ್ಞನಿಂದ. ಅದುಅವರ ಹುಟ್ಟೂರು. ಈ ಗ್ರಾಮ ೧೨ನೇ ಶತಮಾನದಲ್ಲಿ ಶರಣಏಕಾಂತರಾಮಯ್ಯಅವರುಜೈನಸಮುದಾಯದವರೊಂದಿಗೆ ಶಿವನೇ ಜಿನನಿಗಿಂತ ಶ್ರೇಷ್ಠ ಎಂದು ವಾದಿಸಿ, ಅದನ್ನು ಸಾಧಿಸಿ ತೋರಿಸಲುತನ್ನ ಶಿರವನ್ನು ದೇಹದಿಂದ ಛೇದಿಸಿಕೊಂಡು, ಪುನಃ ಜೋಡಿಸಿಕೊಂಡು ಮಹಿಮೆ ಮೆರೆದ ಪ್ರಸಿದ್ಧ ಸ್ಥಳವಾಗಿದೆ ಎಂದು ಡಾ. ವೀರಣ್ಣದಂಡೆ ಅವರು ವಿವರಿಸಿದರು.
ಅವರು ದಿನಾಂಕ ೨೯-೯-೧೯ ರಂದು ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ಲಿಂ.ಗಂಗಮ್ಮ ವೀರಪ್ಪ ಹತ್ತಿ ಸ್ಮರಣಾರ್ಥಅರಿವಿನ ಮನೆ ೬೧೦ ನೆಯದತ್ತಿಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಲಬುರಗಿ ಜಿಲ್ಲೆಯ ಆಳಂದ ನಗರದಶರಣಏಕಾಂತರಾಮಯ್ಯ ಅಬಲೂರಿನಲ್ಲಿಜೈನರೊಡನೆ ಸೆಣಸಾಟ ಮಾಡಿ ನಡೆಸಿದ ಪ್ರಸಿದ್ಧ ಶಿರಸ್ ಪವಾಡಕಥೆಯನ್ನುಡಾ. ದಂಡೆಅವರು ಪ್ರಾತ್ಯಕ್ಷಿಕೆ (ಚಿತ್ರಪ್ರದರ್ಶನ) ಸಹಾಯದೊಂದಿಗೆ ಉಪನ್ಯಾಸವನ್ನು ಕೊಟ್ಟರು. ಏಕಾಂತರಾಮಯ್ಯನಿಗೆ ಸಂಬಂಧಿಸಿದ ಅಬಲೂರಿನಲ್ಲಿ ಶಿರಸ್ ಪವಾಡ ನಡೆದುದು ಬ್ರಹ್ಮೇಶ್ವರ ದೇವಾಲಯದಲ್ಲಿ. ನಂತರಜೈನರೊಡನೆ ಹಾಕಿದ ವಾದದಲ್ಲಿ ಜಯಸಾಧಿಸಿ, ಅವರು ಆ ಗ್ರಾಮದಲ್ಲಿ ಭವ್ಯವಾದ ಸೋಮೇಶ್ವರ ದೇವಾಲಯವನ್ನು ನಿರ್ಮಿಸಿರುವುದು ಒಂದು ಅಪರೂಪದ ಉದಾಹರಣೆ ಯಾಗಿದೆ ಎಂದರು. ಹೀಗೆ ೧೨ನೇ ಶತಮಾನದ ಶರಣರುತಾವುಇನ್ನೂ ಶೈವ ಸಂಪ್ರದಾಯವನ್ನುಒಪ್ಪಿಕೊಂಡಿರುವಾಗ ರೇವಣಸಿದ್ಧ, ಸಿದ್ಧರಾಮ, ಆದಯ್ಯ ಹಾಗೂ ಏಕಾಂತರಾಮಯ್ಯ ಈ ನಾಲ್ಕು ಜನ ಮಾತ್ರ ಶಿವದೇವಾಲಯಗಳನ್ನು ನಿರ್ಮಿಸಿದ್ದು, ಅದರಲ್ಲಿಏಕಾಂತರಾಮಯ್ಯ ನಿರ್ಮಿಸಿದ ಸೋಮೇಶ್ವರದೇವಾಲಯವೇಅತ್ಯಂತ ಭವ್ಯವಾದದೇವಾಲಯವಾಗಿದೆಎಂದರು.
ಶರಣಏಕಾಂತರಾಮಯ್ಯನವರು ಶಿರಸ್ ಪವಾಡದಿಂದ ಮತ್ತು ಸೋಮೇಶ್ವರದೇವಾಲಯ ನಿರ್ಮಿಸಿದುದರಿಂದ ಆಗಿನ ಕಾಲಕ್ಕೆ ತುಂಬ ಪ್ರಸಿದ್ಧಿಯನ್ನು ಪಡೆದರು.ಇವರ ಮಹಿಮೆಯನ್ನು ಕೇಳಿ ಕಲ್ಯಾಣಚಾಲುಕ್ಯದೊರೆ, ೬ನೇ ವಿಕ್ರಮಾದಿತ್ಯನ ಮಗ ೩ನೇ ಸೋಮೇಶ್ವರಏಕಾಂತರಾಮಯ್ಯನವರನ್ನುಕಲ್ಯಾಣಕ್ಕೆ ಬರಮಾಡಿಕೊಂಡು ಸನ್ಮಾನಿಸಿ, ಆನೆಯ ಮೇಲೆ ಮೆರವಣಿಗೆ ಮಾಡಿ, ಅಬಲೂರುಗ್ರಾಮವನ್ನೇಅವರಿಗೆದತ್ತಿಯಾಗಿಕೊಡುತ್ತಾನೆ. ಅದರಂತೆಕಲ್ಯಾಣಚಾಲುಕ್ಯರ ಮಾಂಡಲಿರಾದ ಮಂಗಳವೇಡೆಯ ಕಲಚುರಿ ಬಿಜ್ಜಳ, ಹಾನಗಲ್ಲಿನಕದಂಬ ಕಾಮದೇವರುತಮ್ಮ ಅರಮನೆಗಳಿಗೆ ಕರೆಸಿಕೊಂಡು ಸನ್ಮಾನಿಸಿ ಒಂದೊಂದುಗ್ರಾಮವನ್ನು ಉಂಬಳಿಯಾಗಿ ಕೊಡುತ್ತಾರೆ. ಇದನ್ನು ಅಬಲೂರಿನಕ್ರಿ.ಶ. ೧೨೦೦ನೇ ಶಾಸನ ವಿವರಿಸುತ್ತದೆಎಂದು ಹೇಳಿದರು.
ಆದಯ್ಯ, ಏಕಾಂತರಾಮಯ್ಯ, ಅಗ್ಗವಣಿ ಹೊನ್ನಯ್ಯ ಈ ಮುಂತಾದ ಶರಣರುತಾವಿನ್ನೂ ಶೈವ ಸಂಪ್ರದಾಯದಧಾರ್ಮಿಕ ನಾಯಕರಾಗಿದ್ದಾಗಇತರ ಸಮುದಾಯದವರೊಡನೆ ಹೋರಾಡಿದ್ದಾರೆ.ಅವರು ಮುಖ್ಯವಾಗಿಕರ್ನಾಟಕದಲ್ಲಿ ಹೋರಾಡಿದ್ದುಜೈನ ಸಮುದಾಯದವರೊಂದಿಗೆ.ಇವರೆಲ್ಲ ನಂತರ ಬಸವಣ್ಣನವರು ಪ್ರಾರಂಭಿಸಿದ ಸಮಾಜೋಧಾರ್ಮಿಕಆಂದೋಲನಕ್ಕೆ ಮಾರು ಹೋಗಿ, ಬಸವಣ್ಣನವರ ಸಂಪರ್ಕಕ್ಕೆ ಬಂದು, ತಮ್ಮಉಗ್ರತ್ವವನ್ನು ಕಳೆದುಕೊಂಡು ಶರಣರಾಗಿದ್ದಾರೆಎಂದುಅಭಿಪ್ರಾಯಪಟ್ಟರು.
ಸಭೆಯಅಧ್ಯಕ್ಷತೆಯನ್ನು ಶ್ರೀ ನಾಗಣ್ಣಗಣಜಲಖೇಡಅವರು ವಹಿಸಿದ್ದರು.ಹಿರಿಯರಾದ ವೀರಣ್ಣ ಪಡಶೆಟ್ಟಿಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದಡಾ.ಜಯಶ್ರೀದಂಡೆ, ದತ್ತಿ ದಾಸೋಹಿಗಳಾದ ಶ್ರಿ ಎಸ್.ವಿ. ಹತ್ತಿಅವರು ವೇದಿಕೆಯಲ್ಲಿ ಹಾಜರಾರಿದ್ದರು.ಪ್ರಧಾನ ಕಾರ್ಯದರ್ಶಿ ಎಚ್.ಕೆ.ಉದ್ದಂಡಯ್ಯಅವರುಕಾರ್ಯಕ್ರಮ ನಡೆಸಿಕೊಟ್ಟರು.