ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದಿಂದ ಶನಿವಾರ ಹೆಬ್ಬಾಳ ಗ್ರಾಮದ ಅಣವೀರಭದ್ರೇಶ್ವ ದೇವಸ್ಥಾನದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಯಿತು.
ಅಣವೀರಭದ್ರೇಶ್ವರ ದೇವಸ್ಥಾನ ಸ್ವಚ್ಛತಾ ಹಾಗೂ ದೇವಸ್ಥಾನದ ಆವರಣದಲ್ಲಿ ಸಸಿ ನೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಶರಣಬಸವೇಶ್ವರ ಸಂಸ್ಥಾನದ ವತಿಯಿಂದ ದೇವಸ್ಥಾನಕ್ಕೆ ಸೋಲಾರ್ ಲೈಟ್ (ಸೋಲಾರ್ ಪ್ಯಾನೇಲ್) ವಿತರಿಸಲಾಯಿತು.
ಹೆಬ್ಬಾಳ ಗ್ರಾಮದ ಮುರಾರ್ಜಿ ದೇಸಾಯಿ ಶಾಲೆಯ ಮಕ್ಕಳಿಗೆ ಭಾಷಣ, ರಂಗೋಲಿ ಹಾಗೂ ಹಾಡುಗಾರಿಕೆ ಸ್ಪರ್ಧೆಯನ್ನು ಆಯೋಜಿಸಲಾಗಿತು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅದಲ್ಲದೇ ಪ್ರವಾಸೋದ್ಯಮ ಬಗ್ಗೆ ಜಾಗೃತಿ ಮೂಡಿಸಲು ಪ್ರವಾಸೋದ್ಯಮ ವಿದ್ಯಾರ್ಥಿಗಳು ’ಅತಿಥಿ ದೇವೋಭವ’ ಎಂಬ ಸಂದೇಶ ಹೊಂದಿದ ಬೀದಿ ನಾಟಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಡಾ. ವಾಣೀಶ್ರೀ, ಪ್ರೊ. ಮಂಜುನಾಥ್, ಪ್ರೊ. ಕಲ್ಯಾಣರಾವ್, ಪ್ರೊ. ದೀಲಿಪ ಪ್ರೊ. ಪಾಟೀಲ, ಪ್ರೊ. ಅನುಪಂ ಪಾಟೀಲ, ಪ್ರೊ. ರವಿ ಎಂ.ಎಂ, ಪ್ರೊ. ವೀರೇಶ ಮಾಲಿ ಪಾಟೀಲ, ಪ್ರೊ. ಶ್ವೇತಾ ಪಾಟೀಲ, ಪ್ರೊ. ಸವಿತಾ ಮುರಾಳೆ, ಪ್ರೊ. ರಾಹುಲ್ ರಾಠೋಡ, ಪ್ರೊ. ಮಹೇಶ್ಚಂದ್ರ ಪಾವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ಅಣ್ಣಾರಾವ, ಗ್ರಾಮ ಪಂಚಾಯಿತಿ ಸದಸ್ಯ ಸತೀಶ ಸುಲೇಪೇಟ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಶಿವಬಾಳ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಾಮರಾವ ಕಲಬುರಗಿ ಇದ್ದರು.