ಮಹಿಳೆಯರು ಅನ್ಯಾಯದ ವಿರುದ್ಧ ನಿಲ್ಲುವುದು ಅವಶ್ಯಕ: ಶೋಭಾ.ಎಸ್

0
39

ಶಹಾಬಾದ: ಮಹಿಳೆಯರು ಅನ್ಯಾಯದ ವಿರುದ್ಧ ಹೋರಾಟದ ಜತೆಗೆ ವೈಚಾರಿಕವಾಗಿ ಗಟ್ಟಿಯಾಗಿ ನಿಲ್ಲುವುದು ಬಹಳ ಅವಶ್ಯಕ ಎಂದು ಐಎಂಎಸ್‍ಎಸ್ ರಾಜ್ಯ ಕಾರ್ಯದರ್ಶಿ ಶೋಭಾ.ಎಸ್ ಹೇಳಿದರು.

ಅವರು ಸೋಮವಾರ ಹನುಮಾನ ನಗರದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ಸ್ಥಳೀಯ ಸಮಿತಿಂ ಹಮ್ಮಿಕೊಂಡಿದ್ದ ಮಹಿಳಾ ಶಿಬಿರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

Contact Your\'s Advertisement; 9902492681

ಮಹಿಳೆಯರ ಬದುಕೇ ಹೋರಾಟದ ಬದುಕಾಗಿದೆ. ಮಹಿಳೆಯರು ದುಡಿಮೆ ಸಂಸಾರ ಜತೆಯಲ್ಲಿ ಅನ್ಯಾಯ ಮತ್ತು ಮಹಿಳಾ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟ ಕಟ್ಟಬೇಕು. ಬಲಿಷ್ಠ ಹೋರಾಟ ಕಟ್ಟಲು ಮಹಿಳೆಯರು ವೈಚಾರಿಕವಾಗಿ ತಿಳಿದುಕೊಳ್ಳಲು ಬಹಳ ಅವಶ್ಯಕತೆ ಇದೆ. ಆದ್ದರಿಂದ ಮಹಿಳಾ ಸಂಘಟನೆಯಿಂದ ಹೋರಾಟದ ಜೊತೆ ಜೊತೆಯಲ್ಲಿ ಇತರೆ ವೈಚಾರಿಕ ಶಿಬಿರಗಳು ಹಾಗೂ ಮಹಾನ್ ವ್ಯಕ್ತಿಗಳ ಕುರಿತು ಸಂವಾದ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಾ ರಾಜ್ಯ ಸಮಿತಿ ಬಂದಿz.É ಪ್ರಸಕ್ತ ಭಾರತದಲ್ಲಿ ದಿನನಿತ್ಯ ಮಹಿಳೆಯರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ.

ನಿರುದ್ಯೋಗ, ಬೆಲೆ ಏರಿಕೆ, ಮಹಿಳಾ ದೌರ್ಜನ್ಯ ಅಪರಾಧಗಳು ಹೆಚ್ಚಾಗುತ್ತಿದ್ದು ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹೊಂದಲು ದೇಶದಲ್ಲಿ ಬಂಡವಾಳ ಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯಿಂದಲೇ ಪರಿಹಾರ ಸಾಧ್ಯ.ಆ ಕ್ರಾಂತಿಗೆ ಮಹಿಳೆಯರು ವೈಚಾರಿಕವಾಗಿ ಗಟ್ಟಿಯಾಗಿ ಸಂಘಟಿತ ಆಂದೋಲನ ಕಟ್ಟಬೇಕೆಂದರು.

ಎಐಎಂಎಸ್‍ಎಸ್ ಜಿಲ್ಲಾಧ್ಯಕ್ಷ ಗುಂಡಮ್ಮ ಮಡಿವಾಳ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಸಮಸ್ಯೆಗಳನ್ನು ತೆಗೆದುಕೊಂಡು ಹಲವಾರು ಯಶಸ್ವಿ ಚಳುವಳಿಗಳನ್ನು ಕಟ್ಟುತ್ತಾ ಬಂದಿದೆ. ಹಾಗೂ ಉನ್ನತ ಸಂಸ್ಕೃತಿ ಮೌಲ್ಯಗಳ ಬೆಳೆಸಲು ಭಗತ್ ಸಿಂಗ್, ನೇತಾಜಿ ಅವರ ಕುರಿತು ಸಂವಾದ ಕಾರ್ಯಕ್ರಮ ಕೂಡ ಮಾಡುತ್ತಾ ಬಂದಿದೆ.ಈ ಎಲ್ಲಾ ಹೋರಾಟಗಳು ಕೇವಲ ಅನ್ಯಾಯದ ವಿರುದ್ಧ ಮತ್ತು ಜನಸಾಮನ್ಯರ ಸಮಸ್ಯೆಗಳ ಪರವಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಎಂಎಸ್‍ಎಸ್ ರಾಜ್ಯನಾಯಕಿ ಡಾ. ಸೀಮಾ ದೇಶಪಾಂಡೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸ್ಥಳೀಯ ಐಎಂಎಸ್‍ಎಸ್ ಅಧ್ಯಕ್ಷೆ ಮಹದೇವಿ ಮಾನೆ ಅಧ್ಯಕ್ಷತೆಯನ್ನು ವಹಿಸಿದ್ದರು. ಅಂಬಿಕಾ.ಆರ್ ನಿರೂಪಿಸಿದರು. ಶಿಬಿರದಲ್ಲಿ ಸಾಬಮ್ಮ ಕಾಳಗಿ ರಾಧಿಕಾ ಚೌಧರಿ, ರೇಣುಕಾ ಮಾನೆ, ಸವಿತಾ, ಮಹಾದೇವಿ ಅಥನೂರ್ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here