ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಗ್ರಾಜುವೇಷನ್ ಡೇ

0
31

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್, ಎಂಬಿಎ ಮತ್ತು ಎಂ.ಟೆಕ್ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಗ್ರಾಜುವೇಷನ್ ಡೇ ಕಾರ್ಯಕ್ರಮ ನೆರವೇರಿತು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಶರಣಬಸವಪ್ಪ ವಿ ನಿಷ್ಠಿ, ಹಿರಿಯ ನ್ಯಾಯವಾದಿಗಳು, ಮಹಾವಿದ್ಯಾಲಯ ಕಾರ್ಯದರ್ಶಿಗಳು ಹಾಗೂ ಬಸವರಾಜ್ ದೇಶಮುಕ, ಕಾರ್ಯದರ್ಶಿಗಳು, ಶರಣಬಸವೇಶ್ವರ ವಿದ್ಯಾವರ್ಧಕ್ ಸಂಘ ಕಲಬುರ್ಗಿ ಮತ್ತು ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ನಿಷ್ಠಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Contact Your\'s Advertisement; 9902492681

ಮಹಾವಿದ್ಯಾಲಯ ಕಾರ್ಯದರ್ಶಿಗಳಾದ ಶರಣಬಸವಪ್ಪ ವಿ ನಿಷ್ಠಿಯವರು ವೀರಭದ್ರಪ್ಪ ನಿಷ್ಠಿ ಜಾಗೀರ್ದಾರವರು ಇಂದು ಹುಟ್ಟಿದ ದಿನ ಎಂದು ನೆನಪಿಸುವದರ ಮುಕಾಂತರ ನಿಷ್ಠಿ ಮನೆತನದವರು ಸಮಾಜ ಚಿಂತಕರು ಹಾಗೂ ಅವರು ಮಾಡಿದ ಸಮಾಜ ಕಾರ್ಯಕ್ರಮಗಳನ್ನು ಹಂಚಿಕೊಂಡರು. ಮುಂದಿನ ವರ್ಷ ನಮ್ಮ ವಿದ್ಯಾಲಯದಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಕೋರ್ಸ್ ನ್ನು ತರುವ ಪ್ರಯತ್ನವು ಕೂಡ ಮಾಡುತಿದ್ದೇವೆ ಎಂದು ಹೇಳಿದರು ಮತ್ತು ಪದವಿ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಶರಣಬಸವೇಶ್ವರ ವಿದ್ಯಾವರ್ಧಕ್ ಸಂಘದ ಕಾರ್ಯದರ್ಶಿಗಳಾದ ಬಸವರಾಜ್ ದೇಶಮುಕರವರು ಪದವಿ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರುತ್ತಾ ಪೂಜ್ಯ ಡಾ.ಶರಣಬಸವಪ್ಪ ಅಪ್ಪರವರು ಸುರುಪುರಿನ ನಗರದಲ್ಲಿ ಇಂಜಿನಿಯರಿಂಗ್ ಕಾಲೇಜು ತೆಗೆಯುವುದು ಮತ್ತು ಇಲ್ಲಿನ ಸುತ್ತಮುತ್ತಲಿನ ಬಡವರಿಗೆ ಹಾಗೂ ರೈತ ಮಕ್ಕಳಿಗೆ ವಿದ್ಯಾಅಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದು ಅವರ ಕನಸಾಗಿತ್ತು ಎಂದು ಹೇಳಿದರು ಹಾಗೆ ಈ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅವಕಾಶಗಳು ಸಿಕ್ಕಾಗಲೇ ಉಪಯೋಗ ತೆಗೆದುಕೊಳ್ಳಬೇಕು ಮತ್ತು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿ ಪ್ರಾಮಾಣಿಕತೆಯಿಂದ ಬೆಳೆದರೆ ಯಶಸ್ಸು ಸಾಧ್ಯ ಎಂದು ಹೇಳಿದರು.

ದೊಡ್ಡಪ್ಪ ಎಸ್ ನಿಷ್ಠಿ ಅವರು ಮಾತನಾಡಿ ಈ ಭಾಗದ ಕೃಷಿಕರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶರಣಬಸವೇಶ್ವರ ಸಂಸ್ಥೆಯವರು ಅಪಾರ ಕೊಡುಗೆ ನೀಡಿದ್ದಾರೆ ಮತ್ತು ಇಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಇತರೆ ಚಟುವಟಿಕೆಗಳಲ್ಲಿ ತಮ್ಮದೇ ಆದ ಕಾಶಲ್ಯಗಳನ್ನು ಪ್ರದರ್ಸಿಸಲು ಸಹಾಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು ಕಾಲೇಜಿನ ಮೈಲಿಗಲ್ಲುಗಳು ಮತ್ತು ಎಲ್ಲ ವಿಭಾಗದ ವಿದ್ಯಾರ್ಥಿಗಳ ಸಾದನೆಗಗಳನ್ನು ಹಂಚಿಕೊಂಡರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು.

ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ. ಅಶೋಕ್ ಪಾಟೀಲ್ ಮತ್ತು ಇತರ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರಿಗೆ ಮತ್ತು ವಿದ್ಯಾರ್ಥಿಗಳ ಪಾಲಕರಿಗೆ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಜ್ಯೋತಿ ಕಿತ್ತೂರಿಮಠ್ ಹಾಗೂ ನಮಿತಾ ಠಾಕುರ್ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here