ಕಲಬುರಗಿ: ಯುವಕರು ಬದಲಾದರೆ ದೇಶದ ಹದಗೆಟ್ಟ ವ್ಯವಸ್ಥೆ ಸರಿಪಡಿಸಬಹುದು ಎಂದು ಯುವ ಮುಖಂಡ ಶಿವಕುಮಾರ ನಾಟೀಕಾರ ಹೇಳಿದರು.
ಅಫಜಲಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ ಹಮ್ಮಿಂಡಿದ್ದ ವೀರ ಹುತಾತ್ಮ ಭಗತ್ ಸಿಂಗ್ ಅವರ 112ನೇ ಜನ್ಮ ದಿನಾಚರಣೆ ನಿಮಿತ್ತ ಯುವ ಜಾಗೃತಿ ಉಪನ್ಯಾಸ 101 ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನಿರುಣಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುವ ಅನ್ಯಾಯ, ಅಸತ್ಯ, ಭ್ರಷ್ಟಾಚಾರದ ವಿರುದ್ಧ ಯುವಕರು ಸಿಡಿದೇಳಬೇಕು ಎಂದು ಕರೆ ನೀಡಿದರು.
ಕೆಆರ್ಐಡಿಎಲ್ ನಿವೃತ್ತ ಕಾರ್ಯಪಾಲಕ ಅಭಿಯಂತರ ಜೆ.ಎಂ. ಕೋರಬು ಉದ್ಘಾಟಿಸಿದರು.
ಶರಣ ಮಾರ್ಗ ಪತ್ರಿಕೆ ಸಂಪಾದಕ ಶಿವರಂಜನ್ ಸತ್ಯಂಪೇಟೆ ಅವರು ಯುವ ಜಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಎಪಿಜೆ ಅಬ್ದುಲ್ ಕಲಾಂ ಕಲಾ ಪಿಯು ಕಾಲೇಜು ಪ್ರಾಚಾರ್ಯ ಶಿವಾನಂದ ಬಿ. ಚಿಂಚೋಳಿ ಭಗತ್ ಸಿಂಗ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಇವಿಪಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ತಾಪಂ ಇಇಒ ರಮೇಶ ಸುಲ್ಫಿ, ಬಿಇಒ ವಸಂತ ರಾಠೋಡ್ ಇತರರು ಇದ್ದರು. ಪ್ರಾಚಾರ್ಯ ಶರಣಬಸಪ್ಪ ಬಿ. ಅವಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಸ್ಲಂ ಬಾಬಾ ಕಸಾಬ್ ನಿರೂಪಿಸಿದರು. ಭಾಗ್ಯಶ್ರೀ ಹೂಗಾರ ಪ್ರಾರ್ಥನೆಗೀತೆ ಹಾಡಿದರು. ಆಸೀಫ್ ಪಿಂಜಾರ್ ಸ್ವಾಗತಿಸಿದರು. ಭೀಮಾಶಂಕರ ವಂದಿಸಿದರು.