ಯುವಕರ ಸ್ಪೂರ್ತಿ ಭಗತ್‌‌ ಸಿಂಗ್‌‌: ಗುರುರಾಜ ದೇಸಾಯಿ

0
53

ರಾಯಚೂರು: ಇಂದು ಭಾರತ ವಿದ್ಯಾರ್ಥಿ ಫೆಡರೇಶನ್SFI ವತಿಯಿಂದ ದೇವದುರ್ಗ ನಗರದ ಖೆಣದ ಫಂಕ್ಷನ್ ಹಾಲ್ ನಲ್ಲಿ ಭಗತ್ ಸಿಂಗರ 112ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ತಾಲೂಕ ಮಟ್ಟದ ವಿಚಾರ ಸಂಕಿರಣ ವನ್ನು ಉದ್ಘಾಟನೆ ಮಾಡಿದ SFIನ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಸ್ವಾತಂತ್ರ್ಯ ಚಳುವಳಿಯಲ್ಲಿ ನಡೆದ ಹೋರಾಟದಲ್ಲಿ ಯುವಕರ ಧ್ವನಿ ಯಾಗಿ ನಿಂತಿದ್ದು ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಅವರು ಮಾಡಿದ ಹೋರಾಟ ತ್ಯಾಗ ಬಲಿದಾನ ಇಂದಿಗೂ ದೇಶ ಚಿರಸ್ಮರಣೀಯ ವಾಗಿ ನೆನೆಪಿಸುತ್ತಿದೆ ಅವರು ಈ ದೇಶದ ಆಸ್ತಿ ಆಗಿ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಅವರ ಆದರ್ಶ ಮತ್ತು ತತ್ವ ಸಿದ್ದಾಂತಗಳು ಇಂದಿನ ಯುವಕರಿಗೆ ಮಾದರಿಯಾಗಬೇಕಿದೆ ಆದರೆ ನಮ್ಮ ಯುವಕರ ಮನಸ್ಥಿತಿ ಬೇರೆ ಕಡೆ ಸೆಳೆಯುವ ಕೆಲಸ ವ್ಯವಸ್ಥಿತ ವಾಗಿ ನಡೆಯುತ್ತಿದೆ ಅದನ್ನು ತಡೆಯುವ ಕೆಲಸ ಮಾಡುವುದು ಅವಶ್ಯಕ ವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶಬ್ಬೀರ್ ಜಾಲಹಳ್ಳಿ ಮಾತನಾಡಿ ದೇಶದ ರಾಜಕೀಯ ವ್ಯವಸ್ಥೆ ಕೇವಲ ಉಳ್ಳವರ ಪಾಲಾಗಿದೆ ಅದನ್ನು ತಡೆಯುವ ಕೆಲಸ ಭಗತ್ ಸಿಂಗ್ ಆಗಿನಿಂದ ಸ್ವಾತಂತ್ರ್ಯ ಎಂದರೆ ಯಜಮಾನರ ಬದಲಾವೆ ಯಲ್ಲ ಅದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಿಗುವಂತಾಗಬೇಂದು ಹೇಳಿದರು ವೇದಿಕೆ ಮೇಲೆ CITUನ ಶೇಖಮ್ಮ ದೇಸಾಯಿ ಅಂಗನವಾಡಿ ನೌಕರ ಸಂಘದ ಕಾರ್ಯದರ್ಶಿ ರಮಾ SFIನ ಮಹಾಲಿಂಗ ಸುನಿಲ್ ಕುಮಾರ ತಿಮ್ಮಣ್ಣ ಸದ್ದಾಂ ಶಿಲ್ಪಾ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here