ನೆರೆ ಪರಿಹಾರಕ್ಕೆ ಒತ್ತಾಯಿಸಲು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಮನವಿ

0
92

ಸುರಪುರ: ತಾಲೂಕಿನಲ್ಲಿ ಆಗಸ್ಟ ತಿಂಗಳಲ್ಲಿ ಉಂಟಾದ ಕೃಷ್ಣಾ ನದಿಯ ಪ್ರವಾಹದಿಂದಾಗಿ ಬಹಳಷ್ಟು ಬೆಳೆ ಹಾನಿ ಹಾಗೂ ಆಸ್ತಿಪಾಸ್ತಿ ಸಂಭವಿಸಿದ್ದು, ಹಾನಿಗೊಳಗಾದ ನಿಜವಾದ ಸಂತ್ರಸ್ಥರಿಗೆ ಸರಕಾರದಿಂದ ಪರಿಹಾರ ನೀಡುವಲ್ಲಿ ವಂಚನೆಗೊಳಗಾಗುತ್ತಿದ್ದು ಕೂಡಲೇ ನೆರೆ ಸಂತ್ರಸ್ಥರಿಗೆ ಸರಕಾರದಿಂದ ಪರಿಹಾರ ಒದಗಿಸಲು ಸರಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒತ್ತಡ ಹಾಕಬೇಕು ಎಂದು ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಅವರು ಇತ್ತೀಚೆಗೆ ಕಲಬುರಗಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದಾಗಿ ತಾಲೂಕಿನ ತಿಂಥಣಿ,ದಾದಲಾಪುರ, ಶೆಳ್ಳಗಿ, ಕರ್ನಾಳ, ಬಂಡೋಳಿ, ದೇವಾಪುರ, ನಾಗರಾಳ, ಹಾವಿನಾಳ, ಗೆದ್ದಲಮರಿ, ಹೆಮನೂರು, ಹೆಮ್ಮಡಗಿ, ಚೌಡೇಶ್ವರಿಹಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕೃಷ್ಣಾ ನದಿಯ ಪ್ರವಾಹದ ನೀರು ನುಗ್ಗಿ ರೈತರ ೫ಸಾವಿರ ಎಕರೆ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಭತ್ತ, ಪಪ್ಪಾಯಿ, ದಾಳಿಂಬೆ ಮುಂತಾದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು ಅನೇಕ ಮನೆಗಳಿಗೆ ಹಾನಿ ಆಗಿದೆ ಅಲ್ಲದೆ ಪ್ರವಾಹದ ನೀರಿನಲ್ಲಿ ಫಲವತ್ತಾದ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಆದರೆ ಇದುವರೆಗೂ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪ ಸರಕಾರ ಸಂಪೂರ್ಣ ವಿಫಲವಾಗಿದ್ದು ಸುಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದರು.

Contact Your\'s Advertisement; 9902492681

ತಾಲೂಕಿನಲ್ಲಿ ಸದ್ಯ ಸರಕಾರದಿಂದ ತಾಲೂಕಿಗೆ ಬಂದಿರುವ ಪರಿಹಾರ ಧನ ನೀಡುವಲ್ಲಿ ಪಕ್ಷ ತಾರತಮ್ಯ ನೀತಿ ಅನುಸರಿಸುತ್ತಿದ್ದು ನೆರೆ ಹಾವಳಿಗೆ ತುತ್ತಾದ ನಿಜವಾದ ರೈತರಿಗೆ ಪರಿಹಾರ ಸಿಕ್ಕಿಲ್ಲ ಕಳೆದ ಸೆ೧೨ ರಂದು ಪರಿಹಾರಕ್ಕಾಗಿ ಒತ್ತಾಯಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದ್ದು ಇದುವರೆಗೂ ಹಾನಿಗೊಳಗಾದ ನಿಜವಾದ ನೆರೆ ಸಂತ್ರಸ್ಥರಿಗೆ ಪರಿಹಾರ ಕೊಡುವಲ್ಲಿ ಸರಕಾರ ಸಂಪೂರ್ಣ ವಿಫಲಗೊಂಡಿದೆ, ಕೂಡಲೇ ಈ ಬಗ್ಗೆ ಗಂಭಿರವಾಗಿ ತೆಗೆದುಕೊಂಡು ಸುರಪುರ ಮತಕ್ಷೇತ್ರದಲ್ಲಿ ನೆರೆ ಸಂತ್ರಸ್ಥರಿಗೆ ಹಾನಿಗೊಳಗಾದ ರೈತರ ಜಮೀನುಗಳಿಗೆ ಪ್ರತಿ ಎಕರೆಗೆ ೨೫ಸಾವಿರ ರೂಪಾಯಿ ಹಾಗೂ ಮನೆ ಕಳೆದುಕೊಂಡವರಿಗೆ ೧೦-೧೫ಲಕ್ಷ ರೂ ಪರಿಹಾರವನ್ನು ಸರಕಾರದಿಂದ ನೀಡುವಂತೆ ಶಿಫಾರಸ್ಸು ಮಾಡುವ ಮೂಲಕ ಒತ್ತಡ ಹಾಕಿ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here