ಕಲಬುರಗಿ : ಮಹಾತ್ಮ ಗಾಂಧೀಜಿಯವರ ಅವರ ತತ್ವ ಆದರ್ಶ ಗುಣಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿರಂಜನ ವ್ಹಿ. ನಿಷ್ಠಿ ಅವರು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಗಾಂಧೀ ಅಧ್ಯಯನ ಕೇಂದ್ರದಿಂದ ಆಯೋಜಿಸಿದ ಮಹಾತ್ಮ ಗಾಂಧೀಜಿಯವರ ೧೫೦ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದರು. ಜಗತ್ತು ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧೀಯವರು ಮೊದಲಿಗರಾಗಿದ್ದು, ಅವರ ಸರಳತೆ, ಅಹಿಂಸಾ ಗುಣಗಳು ಪ್ರಪಂಚಕ್ಕೆ ಮಾದರಿಯಾಗಿವೆ. ಅವರಿಂದ ಈಗಿನ ಯುವ ಜನತೆ ಏನು ಕಲಿಯಬೇಕು ಎಂಬುದು ಮುಖ್ಯವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅವರ ಪಟ್ಟ ಶ್ರಮ ಪ್ರತಿಯೊಬ್ಬರು ತಿಳಿಯಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಕಠಿಣ ಸತ್ಯಾಗ್ರಹಗಳನ್ನು ಮಾಡುವುದರ ಮೂಲಕ ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದು ಕೊಡುವುದರಲ್ಲಿ ಪ್ರಮುಖರಾದರು. ಅವರೊಬ್ಬ ಶ್ರೇಷ್ಠ ಸಂತರು, ಯಾವುದೇ ವೈಭವ ಜೀವನಕ್ಕೆ ಕಟ್ಟು ಬಿಳದೆ ದೇಶದ ಒಳಿತಿಗಾಗಿ ಶ್ರಮಿಸಿದವರು. ಅಂತಹ ಶ್ರೇಷ್ಠ ವ್ಯಕ್ತಿ ನೊಬೆಲ್ ಪ್ರಶಸ್ತಿಗೆ ೮ ಬಾರಿ ಆಯ್ಕೆಯಾದರೂ ಅವರಿಗೆ ನೊಬೆಲ್ ಪ್ರಶಸ್ತಿ ದೊರಕದಿರುವುದು ವಿಷಾದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಮಹಾತ್ಮ ಗಾಂಧೀಜಿಯವರು ನಮ್ಮ ಶರಣಬಸವೇಶ್ವರ ಸಂಸ್ಥಾನಕ್ಕೆ ಆಗಮಿಸಿ ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರನ್ನು ಭೇಟಿ ಮಾಡಿ ಬಹಳ ಗೌರವದಿಂದ ಕಂಡು ಮಾತನಾಡಿದರು. ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಗಾಂಧೀಜಿಯವರು ಅಹಿಂಸೆಯ ಮೂಲಕ ಬ್ರಿಟಿಷರನ್ನು ಭಾರತದಿಂದ ತೊಲಗಿಸಿ, ಸ್ವಾತಂತ್ರ್ಯ ದೊರಕುವಂತೆ ಮಾಡಿದರು. ವಿದ್ಯಾರ್ಥಿಗಳು ಅವರ ಕುರಿತಾದ ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ಡಾ.ಶಾಂತಲಾ ನಿಷ್ಠಿ, ಮಹಾವಿದ್ಯಾಲಯದ ಗಾಂಧೀ ಅಧ್ಯಯನ ಕೇಂದ್ರದ ಸಹ ಸಂಯೋಜಕರಾದ ಡಾ. ಎನ್.ಎಸ್.ಹೂಗಾರ, ಡಾ.ಸಂಗೀತಾ ಪಾಟೀಲ ಇದ್ದರು.
ಕಾರ್ಯಕ್ರಮದಲ್ಲಿ ಡಾ. ಇಂದಿರಾ ಶೇಟಕಾರ, ಡಾ.ಸಿದ್ದಮ್ಮ ಗುಡೇದ್, ಪ್ರೊ. ಸಾವಿತ್ರಿ ಜಂಬಲದಿನ್ನಿ, ಪ್ರೊ. ಜಾನಕಿ ಹೊಸೂರ, ಡಾ. ಪುಟ್ಟಮಣಿ ದೇವಿದಾಸ, ಡಾ.ಎಮ್.ಆರ್.ಹುಗ್ಗಿ, ಡಾ.ಸಿದ್ಧಲಿಂಗರೆಡ್ಡಿ, ಈರಣ್ಣ ಸ್ವಾದಿ, ಕೃಪಾಸಾಗರ ಗೊಬ್ಬುರ, ಸಿದ್ದು ಪಾಟೀಲ ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಡಾ. ಎನ್.ಎಸ್.ಹೂಗಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಡಾ. ಸಂಗೀತಾ ಪಾಟೀಲ ವಂದಿಸಿದರೆ, ಡಾ.ಸೀಮಾ ಪಾಟೀಲ ನಿರೂಪಿಸಿದರು. ಪ್ರೊ.ರೇವಯ್ಯ ವಸ್ತ್ರದಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಹಿರಿಯರ ದಿನಾಚರಣೆಯ ಅಂಗವಾಗಿ ಹಿರಿಯ ಖ್ಯಾತ ಕಲಾವಿದೆ ಶ್ರೀಮತಿ ನರ್ಮದಾ ಕೆ.ಚಿಂಚನಸೂರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅ. ೨ರಂದು ಮಹಾವಿದ್ಯಾಲಯದಲ್ಲಿ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ಪ್ರಾಧ್ಯಾಪಕಿ ಡಾ. ರೇಣುಕಾ ಹಾಗರಗುಂಡಗಿ ಅವರಿಂದ ಭಜನೆ ಕಾರ್ಯಕ್ರಮ ಮತ್ತು ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದಿಂದ ಶ್ರಮದಾನ ಹಮ್ಮಿಕೊಳ್ಳಲಾಗಿದೆ.