ಸುರಪುರ: ಶ್ರೀ ಪ್ರಭು ಕಲಾ ವಿಜ್ಞಾನ ಹಾಗೂ ಜೆ. ಎಮ್. ಬೊಹ್ರಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದ ಸುರಪುರ ಶಾಖೆಯ ಸಂಯುಕ್ತಾಶ್ರಯದಲ್ಲಿ ಯೋನೊ ಯಾಪ್ ಕುರಿತಾದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುರಪುರ ಎಸ್.ಬಿ.ಐ ಶಾಖೆಯ ವ್ಯವಸ್ಥಾಪ ವಿನಾಯಕರವರು ಮಾತನಾಡಿ,ಆಧುನಿಕ ಜಂಜಾಟದ ಇಂತಹ ದಿನಗಳಲ್ಲಿ ಹಣಕಾಸಿನ ವ್ಯವಹಾರ ವಹಿವಾಟು ಜಟೀಲವಾದ ಸಮಸ್ಯೆಯಾಗಿ ಮಾರ್ಪಟಿದ್ದು ಹಣಕಾಸಿನ ವಹಿವಾಟುಗಳಿಗಾಗಿ ಬ್ಯಾಂಕುಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ತಮ್ಮ ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ಒಂದು ತ್ರಾಸದಾಯಕ ಕೆಲಸವಾಗಿದೆ. ಇದನ್ನು ತಪ್ಪಿಸಲು ತಮ್ಮ ತಮ್ಮ ಮೊಬೈಲ ಫೋನ್ ಗಳಲ್ಲಿ ಯೋನೊ ಯಾಪ್ ಅಡವಳಿಸಿಕೊಳ್ಳುವುದರ ಮೂಲಕ ಸುಲಭ ಹಣಕಾಸಿನ ವಹಿವಾಟು ನಡೆಸಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಚ್. ಹೊಸಮನಿ ಮಾತನಾಡಿ, ಬ್ಯಾಂಕಿನ ವಿವಿಧ ಯೋಜನೆಗಳನ್ನು, ಸವಲತ್ತುಗಳನ್ನು ಕುರಿತು ವಿದ್ಯರ್ಥಿಗಳಿಗೆ ಜಾಗೃತಿ ಮೂಡಿಸಲು ಮಹಾವಿದ್ಯಾಲಯಕ್ಕೆ ತಾವು ಆಗಮಿಸಿರುವುದು ಸಂತೋಷದ ವಿಚಾರವಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಯೋನೊ ಯಾಪ್ ಕುರಿತಾದ ತಿಳುವಳಿಕೆ ಮಹತ್ವದಾಗಿದ್ದು, ವಿದ್ಯಾರ್ಥಿಗಳು ಈ ಯಾಪ್ ತಮ್ಮ ಮೊಬೈಲ್ ಗಳಲ್ಲಿ ಅಳವಡಿಸುವದರ ಮೂಲಕ ಸುಗಮ ಮತ್ತು ಸುರಕ್ಷಿತ ಹಣಕಾಸು ವ್ಯವಹಾರ ನಡೆಸಬಹುದಾಗಿದೆ. ಮತ್ತು ತಮ್ಮ ದೈನಂದಿನ ವ್ಯವಹಾರಗಳನ್ನು ಪೂರೈಸಲು ಈ ಯಾಪ್ ವಿಶೇಷವಾಗಿ ನೇರವಾಗುತ್ತದೆ ಎಂದರು.
ಕಾಲೇಜಿನ ಉಪಪ್ರಾಚಾರ್ಯರಾದ ಪ್ರೊ. ವೇಣುಗೋಪಾಲ ನಾಯಕ ಜೇವರ್ಗಿ ಹಾಗೂ ಬ್ಯಾಂಕಿನ ಅಧಿಕಾರಿಗಳಾದ ನಿತೀಶ ಹಾಗೂ ನಾರಾಯಣ ಮತ್ತು ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಾಯಿಬಣ್ಣ ಮುಡಬೂಳ ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ಪ್ರೋ. ಎಮ್.ಡಿ ವಾರಿಸ್, ಪ್ರೊ. ರಾಜಶೇಖರ ಬಬನೂರ, ಪ್ರೊ. ಎಸ್.ಡಿ. ಭರ್ಧಿ, ಪ್ರೊ. ಸಿ.ಎಮ್. ಸುತಾರ, ಡಾ. ಶರಣಗೌಡ ಪಾಟಿಲ್,ಎಸ್.ಎಮ್. ಸಜ್ಜನ,ಶ್ರೀಶೈಲ,ಮಲ್ಹಾರಾವ ಕುಲ್ಕರ್ಣಿ,ಈರಣ್ಣ ಜಾಕಾ,ಯಲ್ಲಪ್ಪ,ಸಂತೋಷ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸಾಯಿಬಣ್ಣ ಎಮ್. ನಿರೂಪಿಸಿದರು, ಡಾ. ಸಿ.ಎಮ್. ಸುತಾರ ಸ್ವಾಗತಿಸದರು,ಶ್ರೀಶೈಲ ವಂದಿಸಿದರು.