ಕಲಬುರಗಿ: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಸ್ಮರಣಾರ್ಥ 2023-24ನೇ ಶೈಕ್ಷಣಿಕ ಸಾಲಿನ ಎನ್. ಎಸ್. ಎಸ್. ಎನ್. ಸಿ. ಸಿ. ರೇಂಜರ್ಸ್ ಹಾಗೂ ರೋವರ್ಸ್ ಘಟಕಗಳು ರೆಡ್ ಕ್ರಾಸ್, ರೆಡ್ ಕ್ಲಬ್, (ಕ್ರೀಡಾ) ಸಾಂಸ್ಕøತಿಕ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಜುಲೈ 13.ರಂದು ನಗರದ ಸರಕಾರ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನ ಪಿ.ಜಿ.ಬಿಲ್ದಿಂಗ್‍ನಲ್ಲಿ ಏರ್ಪಡಿಸಲಾಗುವುದು. ಎಂದು ಡಾ. ನಾಗಪ್ಪ ಗೋಗಿ ಹಾಗೂ ಡಾ. ಶಾಮಲಾ ಸ್ವಾಮಿ ಅವರು ತಿಳಿಸಿದ್ದಾರೆ.
ಸಮಾರೋಪ ಸಮಾರಂಭವನ್ನು ಕೆ.ಕೆ.ಆರ್.ಡಿಬಿ ಅಧ್ಯಕ್ಷರಾದ ಡಾ. ಅಜಯ ಧರ್ಮಸಿಂಗ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಮತಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಲ್ಲಂಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಶಿವಶರಣಪ್ಪ ಗೊಳ್ಳೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರಿನ ವಿಶೇಷ ಆಹ್ವಾನಿತರಾಗಿ ಅಹಿಂಸಾ, ಭಾಷಣಕಾರರು, ಸಮಾಜ ಚಿಂತಕರು, ಚಲನಚಿತ್ರ ನಟರಾದ ಚೇತನಕುಮಾರ ಹಾಗೂ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಸವಿತಾ ತಿವಾರಿ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಡಾ.ಟಿ.ವ್ಹಿ.ಅಡಿವೇಶ, ಡಾ. ಮಲ್ಲೇಶಪ್ಪ ಎಸ್. ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ವಿನೋದಕುಮಾರ ರಾಠೋಡ, ಡಾ. ರಾಜಶೇಖರ ಮಡಿವಾಳ, ಡಾ. ವಿಜಯಾನಂದ ವಿಠ್ಠಲರಾವ, ಡಾ. ಬಿ. ಆರ್. ಅಂಬೇಡ್ಕರ ಸ್ಮರಣಾರ್ಥ ಸಮಿತಿ ಸಂಚಾಲಕರಾದ ಡಾ.ಚಂದ್ರಕಾಂತ ಜಮಾದಾರ, ವಿಧ್ಯಾರ್ಥಿ ಕಲ್ಯಾಣಧಿಕಾರಿ ಡಾ. ಸುರೇಶ ಎಸ್. ಮಾಳೇಗಾಂವ, ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕ ಡಾ. ಬಲಭೀಮ ಸಾಂಗ್ಲಿ, ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕರಾದ ಡಾ. ಬೆಣ್ಣೂರ ವಿಶ್ವನಾಥ, ಡಾ. ಭುವನೇಶ್ವರಿ, ಡಾ. ರೇಖಾ ಅಣ್ಣಿಗೇರಿ, ಡಾ. ಶ್ರೀಮಂತ ಹೋಳಕರ, ಪೆÇ್ರ. ಮೇರಿ ಮಾಥ್ಯೂಸ್, ಡಾ. ನಾಗಪ್ಪ ಟಿ. ಗೋಗಿ, ಡಾ. ರವಿ ಬೌದ್ದೆ, ಡಾ. ಶಿವಲಿಂಗಪ್ಪ ಪಾಟೀಲ, ಪೆÇ್ರ. ದಿನೇಶ ಮೇತ್ರೆ, ಪೆÇ್ರ. ಭೀಮರಾಯ ಕೋತಲೆ, ಡಾ. ವಿಜಯಕುಮಾರ ಗೋಪಾಳೆ, ಪೆÇ್ರ. ಗೌಶಿಯಾ ಬೇಗಂ, ಡಾ. ನಶಿಮ ಫಾತಿಮಾ, ಡಾ. ಸುಹಾಸಿನಿ ಬಿ, ಡಾ. ಅರುಣಕುಮಾರ ಸಲಗರ, ಡಾ. ಶಾಮಲಾ ಸ್ವಾಮಿ, ಅಜಯಸಿಂಗ ತಿವಾರಿ, ಶ್ರೀ ಶಿವಾನಂದ ಸ್ವಾಮಿ ಸೇರಿದಂತೆ ಡಾ|| ಬಿ. ಆರ್. ಅಂಬೇಡ್ಕರ ಸಮಿತಿಯ ಎಲ್ಲಾ ಸದಸ್ಯರು, ಮಹಾವಿದ್ಯಾಲಯದ ಭೋದಕ ಹಾಗೂ ಭೋದಕೇತರ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸುವರು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.