ಕಲಬುರಗಿ: ಗುಲ್ಬರ್ಗ ವಿವಿಯ ಬಿ.ಎಡ್ ಪರೀಕ್ಷೆಯಲ್ಲಿ ಆಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಬಲಿಪಶು ಮಾಡಲಾಗುತ್ತಿದೆ. ಆಕ್ರಮ ನಡೆದಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪ್ರೊ. ಮೇಧಾವಿನಿ ಎಸ್ ಕಟ್ಟಿ ಅವರು ಅಗ್ರಹಿಸಿದ್ದಾರೆ.
ಜುಲೈ 1 ರಿಂದ 7 ವರೆಗೆ ಬಿ.ಎಡ್ ಪರೀಕ್ಷೆಗಳು ಮುಕ್ತಾಯವಾಗಿದ್ದು, ಈ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ವಿಶ್ವವಿದ್ಯಾಲಯದ ವೈಬ್ ಸೈಟ್‍ನಲ್ಲಿ ಸಹ ಪ್ರಕಟಿಸಲಾಗಿತ್ತು. ಪರೀಕ್ಷೆ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ವಿದ್ಯಾರ್ಥಿಗಳ ಮಾಹಿತಿ ಲಭ್ಯವಾಗಿರುವುದರಿಂದ ಶ್ರೀಮತಿ ಇಂದಿರಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ 100 ವಿದ್ಯಾರ್ಥಿಗಳಲ್ಲಿ ಕುಲಸಚಿವರ ಕಾರ್ಯಲಯದಿಂದ 22 ಅರ್ಹ ವಿದ್ಯಾರ್ಥಿಗಳನ್ನು ಆಲ್-ಬದರ್ ಶಿಕ್ಷಣ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅಲ್ಲಿನ ಪ್ರಾಂಶುಪಾಲರಿಗೆ ಮೌಖಿಕಾಗಿ ಸೂಚಿಸಿ ನಂತರ ಅಧಿಕೃತ ಪತ್ರ ನೀಡಲಾಯಿತು.
ಶ್ರೀಮತಿ ಇಂದಿರಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ರೇಗ್ಯುಲರ್ ವಿದ್ಯಾರ್ಥಿಗಳನ್ನು ಎನ್.ವಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಜೋಡಣೆ ಮಾಡಲಾಗಿತ್ತು. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ಸ್ಥಳಾವಕಾಶ ಕೊರತೆಯಿಂದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಮಾಡಲಾಗಿತು. ಕುಲಸಚಿವರ (ಮೌಲ್ಯಮಾಪನ)ರ ಹೆಸರಿನ ನಕಲಿ ಸೀಲ್ ಬಳಸಿ ಪ್ರಥಮ ಸೆಮಿಸ್ಟರನ ಮತ್ತು ತೃತೀಯ ಸೆಮಿಸ್ಟರಿನ 100 ವಿದ್ಯಾರ್ಥಿಗಳ ನಕಲಿ ಪಟ್ಟಿ ಮತ್ತು ನಕಲಿ ಪ್ರವೇಶ ಪತ್ರಗಳನ್ನು ತಯಾರಿಸಿದ ಶ್ರೀಮತಿ ಇಂದಿರಾ ಗಾಂಧಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಅಲ್- ಬದರ್ ಪರೀಕ್ಷಾ ಕೇಂದ್ರದಲ್ಲಿ ತನ್ನ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಕ್ರಮವಾಗಿ ಪರೀಕ್ಷೆ ಬರೆಸಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ನ್ಯಾಯಲಯದ ನಿರ್ದೇಶನದಂತೆ ಶ್ರೀಮತಿ ಇಂದಿರಾ ಗಾಂಧಿ ಶಿಕ್ಷಣ ಸಂಸ್ಥೆಯ 22 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿತು. ಆದರೆ ಈ 22 ವಿದ್ಯಾರ್ಥಿಗಳು ಯಾರು ಕೂಡ ಪರೀಕ್ಷೆಗೆ ಹಾಜರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಅಲ್-ಬದರ್ ಪರೀಕ್ಷಾ ಕೇಂದ್ರ ಕಳುಹಿಸಿದ ಪಟ್ಟಿಗೂ ಮತ್ತು ಶ್ರೀಮತಿ ಇಂದಿರಾ ಗಾಂಧಿ ಶಿಕ್ಷಣ ಸಂಸ್ಥೆ ಸಲ್ಲಿಸಿರುವ ಪಟ್ಟಿಗೆ ತಾಳೆಯಾಗಿರುವುದಿಲ್ಲ ಶ್ರೀಮತಿ ಇಂದಿರಾ ಗಾಂಧಿ ಶಿಕ್ಷಣ ಸಂಸ್ಥೆಯ 100 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸುಮಾರು 60 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅಲ್-ಬದರ್ ಪರೀಕ್ಷಾ ಕೇಂದ್ರದ ಪ್ರಾಂಶುಪಾಲರು ಜುಲೈ 4ರಂದು ವಿವಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ಎರಡು ದಿನ ಆಕ್ರಮವಾಗಿ ಪರೀಕ್ಷೆ ಬರೆದು ಮುಂದಿನ ಪರೀಕ್ಷೆಗೆ ಬಂದಿಲ್ಲ. ಪ್ರಥಮ ಸೆಮಿಸ್ಟರನ ಪರೀಕ್ಷೆಗೆ 22 ವಿದ್ಯಾರ್ಥಿಗಳ ಪೈಕಿ ಅನುತ್ತೀರ್ಣರಾದವರು ಮಾತ್ರ ಪರೀಕ್ಷೆಗೆ ಹಾಜರಾಗಿರಬೇಕ್ಕಾಗಿತ್ತು. ಆದರೆ ಪ್ರಥಮ ಸೆಮಿಸ್ಟರಗೆ ಪುನಃ 100 ನಕಲಿ ವಿದ್ಯಾರ್ಥಿಗಳಿಗೆ ಆಕ್ರಮವಾಗಿ ಪರೀಕ್ಷೆ ಬರೆಸಲು ಪ್ರಯತ್ನ ಮಾಡಲಾಗಿದೆ ಎಂದು ದುರಿದ್ದಾರೆ.
ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಮಂಗಳವಾರ ಪೊಲೀಸರಿಗೆ ದೂರು ನೀಡಿ, ಶ್ರೀಮತಿ ಇಂದಿರಾ ಗಾಂಧಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಮನವಿ ಮಾಡಲಾಗಿದೆ ಎಂದು ಡಾ. ಮೇಧಾವಿನಿ ಎಸ್. ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.