ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅನಾಥೆಯರ ಮದುವೆಗೆ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸಾಕ್ಷಿ

0
95

ಕಲಬುರಗಿ: ಗುರುವಾರ ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅನಾಥೆಯರ ಅಪರೂಪದ ಮದುವೆಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸಾಕ್ಷಿಯಾಗಿ ನವ ವಧು-ವರರಿಗೆ ಉಡುಗೊರೆಯೊಂದು ನೀಡಿ ಶುಭ ಕೋರಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಲ್ಲಿ
ಗುತ್ತಿಗೆ ಮೇಲೆ ಗ್ರೂಪ್ ‘ಡಿ’ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ನಗರದ ಬಾಪು ನಗರ ನಿವಾಸಿ ಶರಣಮ್ಮ ತಂದೆ ಲಕ್ಣ್ಮಣ ಅವರಿಗೆ ವಾಡಿ ಪಟ್ಟಣದ ನಿವಾಸಿ ಮೌನೇಶ ಅವರು ತಾಳಿ ಕಟ್ಟುವ ಮೂಲಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ನೂತನ ಬದುಕಿಗೆ ಹೆಜ್ಜೆ ಇಟ್ಟರು.

Contact Your\'s Advertisement; 9902492681

ತಂದೆ-ತಾಯಿ ಇಲ್ಲದ ಮೌನೇಶ ಸ್ಥಳೀಯ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು ಬಾಡಿಗೆ ಮನೆ ಪಡೆದು ವಾಸವಾಗಿದ್ದಾರೆ. ಅದೇ ರೀತಿ ಚಿಕ್ಕ‌ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡ ಶರಣಮ್ಮ ಸಹ ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಡಿ.ಸಿ. ಅವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಹೋದರಿ ಮದುವೆ ಮಾಡಿಕೊಂಡು ರಾಯಚೂರಿಗೆ ಹೋಗಿದ್ದರಿಂದ ಇವರು ಒಂಟಿಯಾಗಿ ನಗರದಲ್ಲಿ ನೆಲೆಸಿದ್ದರು. ಸೋಮವಾರ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನು ಬದ್ಧವಾಗಿ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here