ಸುರಪುರ: ನಗರದ ಕುಂಬಾರಪೇಟದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮೊಹರಂ ಹಬ್ಬ ಆಚರಣೆ ಅಂಗವಾಗಿ ಸಾರ್ವಜನಿಕರೊಂದಿಗೆ ಶಾಂತಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಭಾಗವಹಿಸಿದ್ದ ಪಿಎಸ್ಐ ಗಳಾದ ಹಣಮಂತಪ್ಪ ಕೆಂಭಾವಿ,ಸಿದ್ದಣ್ಣ ಯಡ್ರಾಮಿ ಮಾತನಾಡಿ,ಮೊಹರಂ ಎನ್ನುವುದು ಎಲ್ಲಾ ಧರ್ಮಿಯರು ಹರ್ಷ ದಿಂದ ಪಾಲ್ಗೊಂಡು ಆಚರಿಸುವ ಹಬ್ಬವಾಗಿದೆ.ಹಿಂದಿನಿಂದಲೂ ಕುಂಬಾರಪೇಟದಲ್ಲಿ ಅದ್ಧೂರಿಯಾಗಿ ಮೊಹರಂ ಆಚರಿಸುತ್ತಿದ್ದು,ಈ ವರ್ಷವೂ ಎಲ್ಲರು ಸೇರಿ ಯಾವುದೇ ರೀತಿಯ ಅಹಿಕತರ ಘಟನೆಗಳಿಗೆ ಆಸ್ಪದೆ ಕೊಡದಂತೆ ಎಲ್ಲರು ಅಣ್ಣ ತಮ್ಮಂದಿರಂತೆ ಸ್ನೇಹ ಸೌಹಾರ್ದತೆಯಿಂದ ಆಚರಿಸುವಂತೆ ತಿಳಿಸಿದರು.
ಯಾರಾದರು ಅನುಚಿತವಾಗಿ ವರ್ತಿಸಿದರೆ ಅಂತವರಿಗೆ ಬುದ್ಧ ಹೇಳಿ,ಒಂದು ವೇಳೆ ಯಾರಾದರೂ ಅಹಿಕರ ಘಟನೆಗೆ ಮುಂದಾದರೆ ಅಂತವರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗುರಿ ಮಾತನಾಡಿ,ನಮ್ಮ ಬಹುಕಾಲ ದಿಂದ ಎಲ್ಲರು ಒಂದಾಗಿ ಹಬ್ಬವನ್ನು ಆಚರಿಸುತ್ತೇವೆ,ಯಾವುದೇ ರೀತಿಯ ಅಹಿಕತರ ಘಟನೆಗೆ ಆಸ್ಪದ ನೀಡದೆ ಒಲ್ಲರು ಒಂದಾಗಿ ಮೊಹರಂ ಆಚರಿಸುತ್ತೇವೆ ಎಂದು ತಿಳಿಸಿದರು.ಸಭೆಯಲ್ಲಿ ಅನೇಕ ಮುಖಂಡರು ಹಾಗೂ ಕುಂಬಾರಪೇಟದ ಸಾರ್ವಜನಿಕರು ಭಾಗವಹಿಸಿದ್ದರು.