ಕಲೆ ಸಂಸ್ಕೃತಿ ಉಳಿಸುವಲ್ಲಿ ಕಲಾತಂಡ ಶ್ರಮ ಅತಿ ಮುಖ್ಯ

0
24

ಕಲಬುರಗಿ: ತಾಲೂಕಿನ ಇಟಗಾ ಗ್ರಾಮದಲ್ಲಿ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ’ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಇಟಾಗ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಚನ್ನವೀರಯ ಹಿರೇಮಠ ಅವರು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ದೇಶದಲ್ಲಿ ಕಲೆ ಸಂಸ್ಕೃತಿ ಉಳಿಯಬೇಕಾದರೆ ಇಂತಹ ಸಂಘ ಸಂಸ್ಥೆ ಗಳ ಪಾತ್ರ ಅತಿ ಮುಖ್ಯ ಹಾಗೂ ನಮ್ಮೆಲ್ಲರ ಕರ್ತವ್ಯ ಎಂದರು.

ಇದೇ ರೀತಿ ನಮ್ಮ ಗ್ರಾಮದಲ್ಲಿ ಪ್ರತಿವರ್ಷ ಕಾರ್ಯಕ್ರಮ ನೋಡ್ತಾ ಬಂದಿದ್ದೇವೆ ಕಲೆ ಸಂಸ್ಕೃತಿ ಉಳಿಸುವಲ್ಲಿ ನಿಮ್ಮ ಕಲಾತಂಡ ಹಾಗೂ ನಿಮ್ಮ ಶ್ರಮ ಅತಿ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ರಂಗವಕ್ಷ ನಾಟಕ ನೃತ್ಯ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ದೊಡ್ಡಮನಿ, ಗುರುನಾಥ್ ದೊಡ್ಮನಿ. ಹೊಸನಪ್ಪ ನಾಯ್ಕೊಡಿ. ಮೋದಿನ್ ಪಟೇಲ್. ಶರಣು ಪಾಟೀಲ. ಲಕ್ಷ್ಮಿಬಾಯಿ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ನಂತರ ಜಾನಪದ ನೃತ್ಯಗಳು ಹಾಗೂ ನಾಟಕ ಪ್ರದರ್ಶನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here