ಶಹಪುರ; ಗ್ರಾಮೀಣ ಪತ್ರಕರ್ತರಿಗೆ ಆದಷ್ಟು ಬೇಗನೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ನೀಡಲು ಸರ್ಕಾರಕ್ಕೆ ಒತ್ತಡ ಹೇರುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಇವರಿಗೆ ಸಂಯುಕ್ತ ಕರ್ನಾಟಕ ಶಹಾಪುರ ಗ್ರಾಮೀಣ ವರದಿಗಾರ ಬಸವರಾಜ ಶಿಣ್ಣೂರ ಅವರು ಸಮಸ್ತ ಯಾದಗಿರಿ ಜಿಲ್ಲಾ ಗ್ರಾಮೀಣ ಪತ್ರಕರ್ತರ ವತಿಯಿಂದ ಮನವಿ ಸಲ್ಲಿಸಿದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಅವರು ಮನವಿ ಸ್ವೀಕರಿಸಿ ಮಾತನಾಡಿ,ಗ್ರಾಮೀಣ ಬಾಗದ ಪತ್ರಕರ್ತರು ಸವಾಲಿನಿಂದ ಹಾಗೂ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ,ಗ್ರಾಮೀಣ ಪತ್ರಕರ್ತರ ಆರ್ಥಿಕ ಸೌಲಭ್ಯ ಮತ್ತು ಇನ್ನಿತರ ಸೌಲಭ್ಯಗಳ ಕೊರತೆ ಇರುವುದು ನಮ್ಮ ಗಮನಕ್ಕೂ ಬಂದಿದೆ.
ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಬಜೆಟ್ ನಲ್ಲೂ ಘೋಷಣೆ ಮಾಡಿದ್ದಾರೆ,ಕೆಲವು ತಾಂತ್ರಿಕ ದೋಷಗಳಿಂದ ತಡೆಹಿಡಿಯಲಾಗಿದ್ದು.ಕೂಡಲೇ ಮುಂದಿನ ದಿನಗಳಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರ್ಗಿಯ ಹಿರಿಯ ಪತ್ರಕರ್ತ, ಲೇಖಕ,ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಜೊತೆಗಿದ್ದರು.