ರಾಜ್ಯಾದ್ಯಂತ ಶಾಂತಿಯುತ ಮತದಾನ

1
192

ಕಲಬುರಗಿ: ಬಿಸಿಲನ್ನು ಲೆಕ್ಕಿಸದೆ ರಾಜ್ಯಾದ್ಯಂತ ಮತದಾರರು ಬೆಳಿಗ್ಗೆ 7 ಗಂಟೆಯಿಂದಲೆ ತಮ್ಮ ದೈನಂದಿನ ಕೆಲಸಗಳನ್ನು ಬದಿಗೊತ್ತಿ ಮತಗಟ್ಟೆಗಳಿಗೆ ಕುಟುಂಬ ಸಮೇತ ಬಂದು ಪ್ರಜಾಪ್ರಭುತ್ವದಲ್ಲಿ ನೀಡಿರುವ ಅತ್ಯಮೂಲ್ಯ ಮತದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಸಂಭ್ರಮದಲ್ಲಿ ಭಾಗಿಯಾದರು.

ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬುದು ಈ ಬಾರಿ ಚುನಾವಣಾ ಆಯೋಗದ ಘೋಷವಾಕ್ಯವಾಗಿತ್ತು. ಈ ಹಿನ್ನಲೆಯಲ್ಲಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಾದ ನೀರು, ಬೆಳಕು, ನೆರಳು ಪರದೆ, ಶೌಚಾಲಯ, ಪ್ರಥಮ ಚಿಕಿತ್ಸಾ ಕಿಟ್ ವ್ಯವಸ್ಥೆ ಮಾಡಲಾಗಿತ್ತು.

Contact Your\'s Advertisement; 9902492681

ಕ್ಷೇತ್ರವಾರು ಮತದಾನ ಪ್ರಮಾಣ:

ಮತಕ್ಷೇತ್ರ     ಮತದಾನ ಪ್ರಮಾಣ %   
Chikkodi 71.79%
Belgum 63.02%
Bagalkot 68.63%
Bijapur 60.28%
Gulbarga 57.63%
Raichur 53.30%
Bidar 60.51%
Koppal 67.00%
Bellary 64.94%
Haveri 70.02%
Dharwad 66.35%
Uttara Kannada 70.46%
Davanagere 58.90%
Shivamogga 70.04%

 

ರಾಜ್ಯದ ಹಲವೆಡೆಮತದಾನ ನಿರಾಶೆದಾಯಕ ಮತದಾನ ಪ್ರಮಾಣ ನಡೆದಿದ್ದು, ಬೇಸಿಗೆ ವಾತವರ್ಣ ಬೆಳಿಗ್ಗೆ ಸುಮಾರು 7 ರಿಂದ 9 ವರೆಗೆ ಮತದಾನ ವೇಗವಾಗಿ ನಡೆದರೆ ಅಪರಹ್ನವಾಗುತ್ತಿದಂತೆ ಮತದಾನ ಪ್ರಮಾಣ ಇಳಿಮುಖವಾಗಿ ಕಾಣತೊಡಗಿತ್ತು ಆದರೆ ಸಂಜೆ 4ಗಂಟೆಯ ನಂತರ ಮತದಾನ ಚುರುಕುಗೊಳುವ ನಿರೀಕ್ಷೆ ಇದ್ದು ಆದರೆ ವೇಗವಾಗಿ ನಡೆಯದೆ ಸುಗಮಾವಾಗಿ ನಡೆಯಿತ್ತು. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದ್ದರೆ. ಈ ಬಾರಿ 5-7% ಮತದಾನ ಕಡಿಮೆಯಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ 70% ಮತದಾನ ವಾಗಿತ್ತು ಆದರೆ ಈ ಬಾರಿ ಲೋಕಸಭೆ ಕಳೆದ ಚುನಾವಣೆಷ್ಟು ದಾಖಲಿಸಲು ಸಾದ್ಯವಾಗಿಲ್ಲ.

ಕಲಬುರಗಿ ಜಿಲ್ಲೆಯಾದ್ಯಂತ ಶೇ.57.63 ರಷ್ಟು ಮತದಾನ

ಕಲಬುರಗಿ (ಮೀಸಲು) ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಸಾಯಂಕಾಲ 8 ಗಂಟೆ ವರದಿಯನುಸಾರ ಅಂದಾಜು ಶೇ.57.63ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.59.75, ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ 50.85, ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 56.66, ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ 62.87, ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ 68.33, ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 55.89,  ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 52.21 ಹಾಗೂ ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 56.95 ಅಂದಾಜು ಮತದಾನವಾಗಿದೆ. ಮತದಾನ ಪ್ರಮಾಣದ ನಿಖರ ಮಾಹಿತಿ ತಡರಾತ್ರಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮತದಾನ ಇಳಿ ಮುಖಕ್ಕೆ ಮುಖ್ಯ ಕಾರಣಗಳು:

ಬೇಸಿಗೆ ಕಾರಣ ಜನರು ಮತದಾನಕ್ಕೆ ತೆರಳದೆ ಇರುವುದು. ಮತಕೇಂದ್ರಗಳಲ್ಲಿ ಕೆಲವು ಪೊಲಿಂಗ್ ಭೂತಗಳಲ್ಲಿ ವೋಟಿಂಗ್ಮಷಿನ್ ಕೈ ಕೊಟ್ಟಿರುವುದರಿಂದ ಕೆಲವೇಡೆ ಮತದಾರರು ಮತ ಹಾಕದೆ ಕೇಂದ್ರಗಳಿಂದ ವಾಪಸ್ ಹೋಗಿರುವುದು. ಹಲವು ಮತದಾರರು ತಮ್ಮ ವಿಳಾಸ ಸ್ಥಾಳಾಂತರ ಗೊಂಡ ಮತದಾರರು ತಮ್ಮ ಮತಗಟ್ಟೆ ಸಿಗದಿರುವುದರಿಂದ ಹಾಗೂ ಕಿರಿಕಿರಿ ಅನಿಸಿರುವುದರಿಂದ ಮತದಾನ ಪ್ರಮಾಣ ಕಮ್ಮಿಯಾಗಿದೆ ಎಂದು ಹೇಳ ಬಹುದು, ಬಹು ಮುಖ್ಯವಾಗಿ ಇದಕ್ಕೆ ಕಾರಣ ನೋಡಿದ್ದಾಗ ಪ್ರತಿ ಭಾರಿ ರಾಜಕೀಯ ಪಕ್ಷಗಳು ಮತದಾನದ ನಾಲ್ಕು ದಿನಗಳ ಮುಂಚೆನೆ ಮತದಾನದ ಚೀಟಿ ವಿತರಿಸುತ್ತಿದ್ದರು. ಆದರೆ ಈ ಬಾರಿ ಕೆಲವುಕಡೆಗಳಲ್ಲಿ ರಾಜಕೀಯ ಪಕ್ಷಗಳು ಮತದಾನ ಚೀಟಿ ವಿತರಿಸದಿರುವುದರಿಂದ ಗೊಂದಲದಲ್ಲಿ ಸಿಲುಕಿ ಮತದಾರರು ಕೇಂದ್ರಗಳಿಗೆ ಬರಲಿಲ್ಲ ಎನ್ನುವುದು ಬಹುಮುಖ್ಯ ಕಾರಣ  ಹೇಳಬಹುದು.

ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು ಒಂಭತ್ತು ಸಖಿ ಮತಗಟ್ಟೆ ಸ್ಥಾಪಿಸಲಾಗಿ ಅವುಗಳಿಗೆ ವಿಶೇಷವಾಗಿ ಬಲೂನ್ ಮತ್ತು ಹೂವಿನಿಂದ ಅಲಂಕಾರ ಮಾಡಿದ್ದು, ಮತದಾರರನ್ನು ಆಕರ್ಷಿಸಿತು. ಮಹಿಳೆಯರೊಂದಿಗೆ ಬರುವ ಚಿಕ್ಕ ಮಕ್ಕಳಿಗೆಂದೆ ಪ್ರತ್ಯೇಕ ಕೋಣೆ ಹಾಗೂ ಆಟಕ್ಕೆಂದು ಪ್ರತ್ಯೇಕ ಸ್ಥಳ ನಿಗದಿಗೊಳಿಸಲಾಗಿತ್ತು. ಇನ್ನು ವಿಧಾನಸಭಾವಾರು ಸಕಲ ಮೂಲಸೌಲಭ್ಯವುಳ್ಳ 9 ಮಾದರಿ ಮತಗಟ್ಟೆಗಳನ್ನು ಸಹ ಸ್ಥಾಪಿಸಲಾಗಿತ್ತು.

ವಿಕಲಚೇತನರ ಮುಖದಲ್ಲಿ ಮಂದಹಾಸ:- ಈ ಬಾರಿ ಚುನಾವಣೆಯಲ್ಲಿ ಚುನಾವಣಾ ಆಯೋಗವು ವಿಕಲಚೇತನರಿಗಾಗಿ ಕೈಗೊಂಡ ವಿನೂತನ ವ್ಯವಸ್ಥೆಗಳು ವಿಕಲಚೇತನರಿಗೆ ನೆಮ್ಮದಿ ಉಂಟು ಮಾಡಿದವು. ಮತಗಟ್ಟೆಗಳಲ್ಲಿ ರ್ಯಾಂಪ್ ಹಾಗೂ ವ್ಹೀಲ್ ಚೇರ್ ವ್ಯವಸ್ಥೆ, ದೃಷ್ಠಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಸರಬರಾಜು ಮಾಡಲಾಗಿತು. ಇನ್ನು ಮತದಾನಕ್ಕೆ ಬರುವ ವಿಕಲಚೇತನರನ್ನು ಕರೆತರಲು ವಾಹನದ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ವಿಕಲಚೇತನರ ಮುಖದಲ್ಲಿ ಮಂದಹಾಸ ಕಂಡುಬಂತು. ವಿಶೇಷವಾಗಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಜಿಲ್ಲೆಯಲ್ಲಿ  ವಿಕಲಚೇತನರೆ ಕಾರ್ಯನಿರ್ವಹಿಸುವ ೯ ಮತಗಟ್ಟೆಗಳನ್ನು ಸಹ ಸ್ಥಾಪಿಸಲಾಗಿತ್ತು.

ಪ್ರದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಂದ ಮತದಾನ:- ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅವರು ಕುಟಂಬ ಸಮೇತ ನಗರದ ಐವಾನ್-ಎ-ಶಾಹಿ ಪ್ರದೇಶದ ಮಹಿಳಾ ಸೇವಾ ಸಮಾಜದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 170ರಲ್ಲಿ ಮತ ಚಲಾಯಿಸಿದರು. ಇದಲ್ಲದೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮತ್ತು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ರಾಗಪ್ರಿಯಾ ಅವರು ನಗರದ ಸಣ್ಣ ನೀರಾವರಿ ಕಚೇರಿಯ ಮತಗಟ್ಟೆ ಸಂಖ್ಯೆ 61ರಲ್ಲಿ ತಮ್ಮ ಮತದಾನ ಮಾಡಿದರು.

ಮತ ಚಲಾಯಿಸಿದ ನವ ದಂಪತಿ:- ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾ ಮತ್ತು  ರಿಜಿತ್ ಕುಮಾರ ಅವರು ಮದುವೆ ಛತ್ರದಿಂದ ನೇರವಾಗಿ ಕಲಬುರಗಿ ನಗರದ ವಿ.ಜಿ.ಮಹಿಳಾ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 166-167ಗೆ ಬಂದು ತಮ್ಮ ಮತ ಚಲಾಯಿಸುವ ಮೂಲಕ ಮತದಾನದ ಮಹತ್ವ ಸಾರಿದರು. ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ರಾಜಾ ಪಿ. ಮತದಾನ ಮಾಡಿದ ನವ ವಧು-ವರನಿಗೆ ಶುಭ ಹಾರೈಸಿದರು.

ಅಣ್ಣತಂಗಿಯಿಂದ ಮೊದಲನೆ ಬಾರಿಗೆ ಹಕ್ಕು ಚಲಾವಣೆ:- ಗುಲಬರ್ಗಾ ಗ್ರಾಮೀಣ ವಿಧಾನಸಭಾ ವ್ಯಾಪ್ತಿಯ ಶಹಾಬಾದ ಪಟ್ಟಣದ ಮತಗಟ್ಟೆ ಸಂಖ್ಯೆ 259ರಲ್ಲಿ ಅಭಿಷೇಕ ಮತ್ತು ಭಾಗ್ಯಶ್ರೀ ಸಹೋದರ-ಸಹೋದರಿ ಇಬ್ಬರು ನವ ಮತದಾರರಾಗಿದ್ದು, ಇದೇ ಪ್ರಥಮ ಬಾರಿಗೆ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿದ್ದೇವೆ ಎಂದು ಮಾಧ್ಯಮದವರೊಂದಿಗೆ  ತಮ್ಮ ಖುಷಿ ಹಂಚಿಕೊಂಡರು. ಇನ್ನು ಇದೇ ಮತಗಟ್ಟೆಯಲ್ಲಿ 25 ವರ್ಷದ ಹಮೀದಾ ಬೇಗಂ ಮತ್ತು 93 ವರ್ಷದ ಸಯ್ಯದ್ ಪೀರಾ ಹುಸೇನಿ ಅವರು ವ್ಹೀಲ್ ಚೇರ್ ಸಹಾಯದಿಂದ ಮತ ಚಲಾಯಿಸುವ ಮೂಲಕ ಮತದ ಮಹತ್ವವನ್ನು ಯುವ ಪೀಳಿಗೆಗೆ ತೋರಿಸಿಕೊಟ್ಟರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here