ವೆಲ್ಫೇರ್ ಪಾರ್ಟಿ ಹೋರಾಟದ ಫಲ, ಇಂದಿರಾ ಕ್ಯಾಂಟೀನ್ ಪುನರಾರಂಭ

0
85

ಕಲಬುರಗಿ : ಇಲ್ಲಿ ಮುಚ್ಚಲಾಗಿದ್ದ ಇಂದಿರಾ ಕ್ಯಾಂಟೀನ್ ಗೆ ಸರಕಾರ ದಿಂದ ಮತ್ತೆ ತೆರೆಯುವ ಭಾಗ್ಯ ಲಭಿಸಿದೆ. ಬಡವರಿಗೆ, ವಿಧ್ಯಾರ್ಥಿಗಳಿಗೆ ಕೂಲಿ ಕಾರ್ಮಿಕರಿಗೆ ಆಸ್ಪತ್ರೆಯ ಬಡರೋಗಿಗಳಿಗೆ ಆಶಾ ಕಿರಣವಾಗಿದ್ದ ಇಂದಿರಾ ಕ್ಯಾಂಟೀನ್ ಕಳೆದ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿತ್ತು. ಇದರ ವಿರುದ್ಧವಾಗಿ ವೆಲ್ಪೇರ್ ಪಾರ್ಟಿಯು ತೀವ್ರ ಸ್ವರೂಪದ ಹೋರಾಟ ಮಾಡಿತ್ತು.

ಈ ಹೋರಾಟದ ಫಲವಾಗಿ ಸರಕಾರವು ಮತ್ತೆ ಇಂದಿರಾ ಕ್ಯಾಂಟೀನ್ ನ್ನು ಪುನರಾರಂಭಗೊಳಿಸಿದೆ. ನಮ್ಮ ಹೋರಾಟಕ್ಕೆ ಸ್ಪಂದಿಸಿದ ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಲಬುರಗಿ ಕ್ರತಜ್ಞತೆ ಸಲ್ಲಿಸಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಲಬುರ್ಗಿ ಜಿಲ್ಲಾ ಸಮೀತಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here