ಪ್ರೌಢ ಶಾಲೆಯಲ್ಲಿ ಅಣಕು ಚುನಾವಣೆ : ಗೆದ್ದು ಬೀಗಿದ ಮಕ್ಕಳು

0
249

ಕಲಬುರಗಿ: ಜಿಲ್ಲೆಯ ಶಹಾಬಾದ ತಾಲೂಕಿನ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತ ಕ್ಲಬ್ ವತಿಯಿಂದ ತರಗತಿ ನಾಯಕತ್ವಕ್ಕಾಗಿ ಮಕ್ಕಳ ಚುನಾವಣೆ ನಡೆಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹೇಗೆ ನಡೆಯುತ್ತವೆ ಎನ್ನುವುದನ್ನು ಶಾಲಾ ಹಂತದಲ್ಲೇ ತಿಳಿಸಲು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಪ್ರತಿ ವರ್ಷ ಇಂತಹ ಪ್ರಯೋಗವನ್ನ ಮಾಡಲಾಗುತ್ತಿದೆ. ಈ ವರ್ಷ ಇವಿಎಂ ಬಳಸಿ ಚುನಾವಣೆ ಮಾಡಲಾಯಿತು. ಒಟ್ಟು 537 ಮತಗಳಲ್ಲಿ 515 ಮತಗಳು ಚಲಾವಣೆಯದವು. 96 ಪ್ರತಿಶತ ಮತದಾನವಾಯಿತು.

Contact Your\'s Advertisement; 9902492681

ಮತದಾನದ ನಂತರ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಪ್ರಮಾಣ ವಚನ ಬೊಧಿಸಿ ಕರ್ತವ್ಯ ನಿರ್ವಹಣೆ ಹೇಗೆ ಮಾಡಬೇಕೆಂದು ಹೇಳಲಾಯಿತು.

ಸಂಸ್ಥೆಯ ಅಧ್ಯಕ್ಷ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ವೀಕ್ಷಿಸಿ ಶಿಕ್ಷಕ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು. ನಂತರ ಮಾತನಾಡಿ ಪೂಜ್ಯರು ಇಂತಹ ಚುನಾವಣೆಗಳ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಬೆಳೆಸುವ ಜೊತೆಗೆ ಚುನಾವಣೆ ಅರಿವು ಬೆಳೆಸಿಕೊಳ್ಳಲು ಅಗತ್ಯ. ಮಕ್ಕಳು ಮತದಾನದ ಮಹತ್ವ ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಮತ ಚಲಾಯಿಸಬೇಕೆಂಬ ಜ್ಞಾನ ಹೊಂದಬೇಕು ಎಂದು ಹೇಳಿದರು.

ಶಿಕ್ಷಕ ಸಿದ್ದಲಿಂಗ ಬಾಳಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಶಿಕ್ಷಕರಾದ ವಿದ್ಯಾಧರ ಖಂಡಳ, ಈಶ್ವರಗೌಡ ಪಾಟೀಲ್, ಶಿವಕುಮಾರ್ ಸರಡಗಿ, ಅನಿಲ್, ಬಸವರಾಜ್, ರವಿ, ಸುಗುಣಾ, ಭುವನೇಶ್ವರಿ, ರಾಧಾ, ಗೀತಾ, ಮಂಜಳಾ, ಭಾರತಿ ಸೇರಿದಂತೆ ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here