ಸಮಾರೋಪ ಸಮಾರಂಭ

0
154

ಕಲಬುರಗಿ:ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ಭಾರತರತ್ನಡಾ. ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ 2023-24 ನೇಯ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್., ಎನ್.ಸಿ.ಸಿ. ರೇಂಜರ್ಸ್ ಮತ್ತುರೋವರ್ಸ್ ಘಟಕಗಳು ರೆಡ್‍ಕ್ರಾಸ್, ರೆಡ್‍ರಿಬ್ಬನ್‍ಕ್ಲಬ್, ಕ್ರೀಡಾ ಸಾಂಸ್ಕøತಿಕ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನುದಕ್ಷಿಣ ಮತಕ್ಷೇತ್ರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಲ್ಲಂಪ್ರಭು ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಡಾ.ಬಲಭೀಮ ಸಾಂಗ್ಲಿ ಅವರು ಬರೆದಿರುವ ಇಂಡಿಯನ್ ಇಂಗ್ಲೀಷ್ ಶಾರ್ಟ ಸ್ಟೋರಿ 1975-2000 ಎ ಕ್ರಿಟಿಕಲ್ ಸರ್ವೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಹಾಗೆ ಇಂದಿನ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಾತನಾಡಿದರು.

ವಿಶೇಷ ಅಹ್ವಾನಿತರಾಗಿ ಆಗಮಿಸಿದ ಚಲನಚಿತ್ರ ನಟರಾದ ಚೇತನಕುಮಾರ ಅಹಿಂಸಾ ಅವರು ವಿದ್ಯಾರ್ಥಿಗಳಿಗೆ ಬುದ್ದ ಬಸವ ಅಂಬೇಡ್ಕರವರ ತತ್ವಗಳು ಮೂಲ ಪ್ರೇರಣೆಯಾಗಬೇಕು ಮತ್ತು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಯಶಸ್ಸುಕಾಣಬೇಕೆಂದರುಇವರು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದರು.

Contact Your\'s Advertisement; 9902492681

ಕಲಾ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂಸ್ಕøತಿಯ ಬೆಳವಣಿಗೆ ಕಾಣಬಹುದುಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಸ್ಯಕಲಾವಿದರಾದ ಶ್ರೀ ಗುಂಡಣ್ಣಡಿಗ್ಗಿರವರು ವಿದ್ಯಾರ್ಥಿಗಳನ್ನು ಮನರಂಜಿಸಿದ್ದರು.ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಯ ಚರಿತ್ರೆಗಳನ್ನು ಓದಬೇಕೆಂದರು.

ಈ ಕಾರ್ಯಕ್ರಮದಲ್ಲಿ ಡಾ.ಟಿ.ವ್ಹಿ. ಅಡಿವೇಶ, ಡಾ. ಮಲ್ಲೇಶಪ್ಪಎಸ್. ಕುಂಬಾರ, ಡಾ.ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ.ವಿನೋದಕುಮಾರರಾಠೋಡ, ಡಾ.ರಾಜಶೇಖರ ಮಡಿವಾಳ, ಡಾ. ವಿಜಯಾನಂದ ವಿಠ್ಠಲರಾವ್‍ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನಿಂದ ಆಗಮಿಸಿದ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿತೇರ ವರ್ಗದವರು ಹಾಗೂ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ ಸ್ಮರಣಾರ್ಥವಾಗಿ ನಡೆದ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಬಹುಮಾನವನ್ನು ಅತಿಥಿಗಣ್ಯರಿಂದ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಡಾ.ಅನುಸುಯಾ ಗಾಯಕವಾಡ ರವರು ಪ್ರಾರ್ಥನೆ ಗೀತೆಯನ್ನು ಹಾಡಿದರು. ಡಾ. ವಿಜಯಕುಮಾರ ಸಾಲಿಮನಿ ಅವರು ಅತಿಥಿಗಣ್ಯರನ್ನು ಸ್ವಾಗತಿಸಿದರು. ಡಾ. ರಾಜಕುಮಾರ ಸಲಗg Àಅವರು ಅತಿಥಿ ಪರಿಚಯ ಮಾಡಿದರು. ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಮಿತಿಯ ಸಂಚಾಲಕರಾದ ಡಾ.ಚಂದ್ರಕಾಂತ ಜಮಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಸುರೇಶ ಎಸ್. ಮಾಳೇಗಾಂವ ಹಾಗೂ ಸಾಂಸ್ಕøತಿಕ ಸಂಚಾಲಕರಾದ ಡಾ.ಬಲಭೀಮ ಸಾಂಗ್ಲಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಬೆಣ್ಣೂರ ವಿಶ್ವನಾಥ, ಡಾ.ಭುವನೇಶ್ವರಿ, ಡಾ.ರೇಖಾ ಅಣ್ಣಿಗೇರಿ, ಡಾ. ಶ್ರೀಮಂತ ಹೋಳಕರ, ಪ್ರೊ.ಮೇರಿ ಮಥ್ಯೂಸ್, ಡಾ.ನಾಗಪ್ಪ ಟಿ. ಗೋಗಿ, ಡಾ.ರವಿ ಬೌದ್ದೆ, ಡಾ. ಶಿವಲಿಂಗಪ್ಪ ಪಾಟೀಲ, ಪ್ರೊ.ದಿನೇಶ ಮೇತ್ರೆ, ಪ್ರೊ. ಭೀಮರಾಯ ಕೋತಲೆ, ಡಾ. ವಿಜಯಕುಮಾರ ಗೋಪಾಳೆ, ಪ್ರೊ. ಗೌಶಿಯಾ ಬೇಗಂ, ಡಾ. ನಶಿಮ ಫಾತಿಮಾ, ಡಾ. ಸುಹಾಸಿನಿ ಬಿ.,ಡಾ. ಅರುಣಕುಮಾರ ಸಲಗರ, ಡಾ.ಶಾಮಲಾ ಸ್ವಾಮಿ, ಅಜಯಸಿಂಗ ತಿವಾರಿ,ಶಿವಾನಂದ ಸ್ವಾಮಿ ರವರು ಉಪಸ್ಥಿತರಿದ್ದರು. ಹಾಗೂ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ ಸಮಿತಿಯ ಸದಸ್ಯರು ಮಹಾವಿದ್ಯಾಲಯದ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಮತ್ತು ಕಾಲೇಜಿನ ಯು.ಜಿ-ಪಿ.ಜಿ. ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು. ಡಾ.ಶ್ರೀಮಂತ ಹೊಳ್ಕರ್ ಅವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here