ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಖಾದ್ರಿ ಚೌಕನಲ್ಲಿರುವ ಸಂಘದ ಕಚೇರಿಯಲ್ಲಿ ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲದ (ಸಕ್ಷಮ) ಉತ್ತರ ಕರ್ನಾಟಕ ಪ್ರಾಂತದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಹೆಳವರ ಯಾಳಗಿ ಅವರಿಗೆ ಕಲಬುರಗಿ ಜಿಲ್ಲಾ ಶಾಖೆ ಹಾಗೂ ವಿಕಲಚೇತನ ಸರ್ಕಾರಿ ನೌಕರರ ಸಂಘ, ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನೀತಿನ ರಂಗದಾಳ, ರಾಚಯ್ಯಸ್ವಾಮಿ ಅಲ್ಲೂರ್, ಮಲ್ಲಿಕಾರ್ಜುನ ಕುಮಸಿ, ಶಾಂತಪ್ಪ ಖ್ಯಾತನ್, ಶಶಿಕಾಂತ ಮೆತ್ರೆ, ಮಹಾಂತೇಶ ಹಾಗೂ ಇನ್ನಿತರ ಪಧಾದಿಕಾರಿಗಳು ಇದ್ದರು.