- ಡಾ. ವೀರಶೆಟ್ಟಿ ಗಾರಂಪಳ್ಳಿ
ಚಿಂಚೋಳಿ: ಲೇಖಕನಿಗೆ ಪ್ರಭುತ್ವ ಪ್ರಶ್ನಿಸುವ ಬದ್ಧತೆ ಇರಬೇಕು. ಬರಹಗಾರ ಸ್ವತಂತ್ರ ವಿಚಾರಧಾರೆಯೊಂದಿಗೆ ಸಮರ್ಥವಾಗಿ ಸರ್ಕಾರಕ್ಕೆ ಸಮಸ್ಯೆಗಳ ಅರಿವು ಮಾಡಿಕೊಡಬೇಕು. ಕೇವಲ ಸಮಸ್ಯೆಗಳನ್ನು ಹೇಳಿದರೆ ಮಾತ್ರ ಸಾಲದು; ಅವುಗಳಿಗೆ ಪರಿಹಾರವನ್ನೂ ಸೂಚಿಸಬೇಕು. ಅಂತಹವರು ಮಾತ್ರ ಸಾಮಾಜಿಕ ಕಳಕಳಿಯುಳ್ಳ ಲೇಖಕರಾಗುತ್ತಾರೆಂದು ಕಲಬುರ್ಗಿ ವಿಭಾಗೀಯ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ಇಲ್ಲಿನ ಚಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಚಿಂಚೋಳಿ ತಾಲೂಕ ಘಟಕ ಏರ್ಪಡಿಸಿದ, ಶಿಕ್ಷಕ ಬಸವರಾಜ ಐನೋಳಿಯವರು ರಚಿಸಿದ ಇಂಜಿನಿಯರುಗಳು ಶಿಕ್ಷಕರಾದರೆ ಕೃತಿಯನ್ನು ಪರಿಚಯಿಸುತ್ತ ಮಾತನಾಡುತ್ತಿದ್ದರು.
ಕಲಬುರಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ವಡ್ಡನ ಕೇರಿಯವರು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ಗ್ರಂಥಗಳು ಜ್ಞಾನದ ಭಂಡಾರಗಳಾಗಿವೆ. ವಿದ್ಯಾರ್ಥಿಗಳಿಗೆ ಪುಸ್ತಕಗಳಿಂದ ಮಾತ್ರ ಪರಿಪೂರ್ಣವಾದ ಜ್ಞಾನ ಲಭಿಸುತ್ತದೆ. ಇದಕ್ಕೆ ಪರ್ಯಾಯ ಮಾರ್ಗಗಳಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಗ್ರಂಥ ಭoಡಾರಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಇಓ ವಿ. ಲಕ್ಷ್ಮಯ್ಯ, ಬಿ ಆರ್ ಸಿ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ಕಮಲಾಪುರ ತಾಲೂಕ ಶರಣ ಸಾಹಿತ್ಯ ಪರಿಷತನ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ, ವಿಶ್ವನಾಥ ಮಂಗಲಗಿ, ಸುರೇಶ ದೇಶಪಾಂಡೆ, ಶಾಮರಾವ ಚಿಂಚೋಳಿ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಪಾಲಾಮೂರ ವಹಿಸಿದ್ದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ತಾಲೂಕಿನ 29 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಶಸಾಪ ಅಧ್ಯಕ್ಷ ಬಸವರಾಜ ಐನೋಳಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗಣಪತ ದೇವಕತ್ತೆ ಸ್ವಾಗತಿಸಿದರು.
ಶ್ರೀಶೈಲ ನಾಗಾವಿ ವಂದಿಸಿದರು. ಶರಣಯ್ಯ ಸ್ವಾಮಿ ಅಲ್ಲಾಪುರ, ರೇವಣಸಿದ್ದಯ್ಯ ಹಿರೇಮಠ, ಗುರುರಾಜ ಜೋಶಿ ವಚನ ಪ್ರಾರ್ಥನೆ ಗೈದರು.