ಕಲಬುರಗಿ: ಸೌಮ್ಯ ಸ್ವಭಾವದ ಶಿಕ್ಷಕರಾದ ಜೆಟ್ಟೆಪ್ಪ ಜಮಾದಾರ್ ಅವರು ನಿವೃತ್ತಿ ಜೀವನ ಉಜ್ವಲವಾಗಲಿ ಎಂದು ಅಫಜಲಪುರ ಶಾಸಕರಾದ ಎಂ ವೈ.ಪಾಟೀಲ್ ಹೇಳಿದರು ಅವರು ಇಂದು ನಗರದ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಜೆಟ್ಟೆಪ್ಪ ಜಮಾದಾರ್ ಅವರ ವಯೋ ನಿವೃತ್ತಿ ಬಿಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಅವರ ಪ್ರೀತಿ ಅಭಿಮಾನದಿಂದ ಬಂದಂತ ಜನಗಳೆ ಸಾಕ್ಷಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ್ ಅವರು ಮಾತನಾಡುತ್ತಾ ನಿವೃತ್ತಿ ಆದ ಮೇಲೆ ಮತ್ತೊಂದು ಜೀವನ ಪ್ರಾರಂಭವಾಗುತ್ತಿದೆ ಮುಂದೆ ಸಮಾಜ ಸೇವೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು.
ಕೋಲಿ ಸಮಾಜ ನೌಕರ ಸಂಘದ ಅಧ್ಯಕ್ಷರಾದ ನೀಲಕಂಠ ಎಂ.ಜಮಾದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್ ಜಮಖಂಡಿ, ಜೆಟ್ಟೆಪ್ಪ ಜಮಾದಾರ್, ಅವರ ಗುಣದಾನ ಮಾಡಿದರು ಚಿಣಮಗೇರಿಯ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಮಾರಂಭದಲ್ಲಿ ಲಚ್ಚಪ್ಪ ಜಮಾದಾರ್ ದೇವೇಂದ್ರ ಜಮಾದಾರ್ ಅಂಬು ಡಿಗ್ಗಿ,ಶಾಂತಪ್ಪ ಕೂಡಿ, ರಾಯಪ್ಪ ಹೊನಗುಂಟಿ, ಸಿದ್ದನಗೌಡ ಪಾಟೀಲ್ , ಗುಂಡೂರಾವ್ ಕಡಣಿ, ವಿದ್ಯಾಸಾಗರ ಚಿಣಮಗೇರಿ, ಯಲ್ಲಾಲಿಂಗ ಕೋಬಾಳ್,ಸಿದ್ದಣ್ಣ ಮಾಲಗಾರ್, ಗೋವಿಂದ ಭಟ್,ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿಯವರು ಸರ್ವಪಳ್ಳಿ ರಾಧಾಕೃಷ್ಣನ ಹಾಗೂ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಂಗಾ ವಿದ್ಯಾಸಾಗರ್ ಅವರು ಜೆಟ್ಟೆಪ್ಪ ಜಮಾದಾರ ಅವರ ಕುರಿತು ಕವನ ವಚನ ಮಾಡಿದರು.ಬಾಬುರಾವ್ ಕೋಬಾಳ ಪ್ರಾರ್ಥಿಸಿದರೆ ಸಿದ್ದರಾಮ ರಾಜಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು ಪರಮಾನಂದ ನಿರೂಪಿಸಿದರು ಚೇತನ್ ಜಮಾದಾರ್ ಸರ್ವರನ್ನು ವಂದಿಸಿದರು.
ಇದೇ ಸಂದರ್ಭದಲ್ಲಿ ಜೆಟ್ಟೆಪ್ಪ ಜಮಾದರ ದಂಪತಿಗಳಿಗೆ ಅಪಾರ ಅಭಿಮಾನಿಗಳು ಅವರಿಗೆ ಸನ್ಮಾನಿಸಿ ಸತ್ಕರಿಸಿದರು,