ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಗೆ ಒತ್ತಾಯಿಸಿ RMSA ಶಿಕ್ಷಕರಿಂದ ಪ್ರತಿಭಟನೆ

0
118

ಕಳೆದ ಎರಡು ವರ್ಷಗಳಿಂದ ಹೊಸದಾಗಿ ರಚನೆಯಾದ ತಾಲೂಕುಗಳ RMSA ಪ್ರೌಢ ಶಾಲೆ ಸಿಬ್ಬಂದಿಗಳ ವೇತನ 4-5 ತಿಂಗಳು ವಿಳಂಬವಾಗಿ ಪಾವತಿಯಾಗುತ್ತಿದೆ. ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಯಾಗುವಂತೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ವಿಧಾನ ಪರಿಷತ್ ಸದಸ್ಯ  ಶಶೀಲ್ ಜಿ ನಮೋಶಿ RMSA ಶಿಕ್ಷಕರು ಮನವಿ ಸಲ್ಲಿಸಿದರು.

ಇದರಿಂದ ಆ ಶಾಲಾ ಶಿಕ್ಷಕ ಸಿಬ್ಬಂದಿಗಳು ಜೀವನ ನಡೆಸುವುದು ತುಂಬಾ ಕಷ್ಟದಾಯಕವಾಗುತ್ತಿದೆ ಹಲವಾರು ಶಿಕ್ಷಕರು ಬ್ಯಾಂಕಿನಿಂದ ಸಾಲ ಪಡೆದುಕೊಂಡಿದ್ದು ಸರಿಯಾದ ಸಮಯಕ್ಕೆ ಸಾಲ ಪಾವತಿಸದಿರುವುದರಿಂದ ಭಾರಿ ಮೊತ್ತದ ದಂಡ ಪಾವತಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ತಮ್ಮ ಕಛೇರಿಗೆ, RMSA ಕಛೇರಿಗೆ, ಜೇವರ್ಗಿ ಚಿತ್ತಾಪೂರ ಕಲಬುರಗಿ ಉತ್ತರ ಮತ್ತು ಚಿಂಚೋಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸುವ ಕೆಲಸ ಆಗಿರುವುದಿಲ್ಲ ಎಂದು ಕಮೀಷನರ್ ಕಚೇರಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಿಸಿ ಮಾತನಾಡಿದರು.

Contact Your\'s Advertisement; 9902492681

ಕ್ಷೇತ್ರ ಶಿಕ್ಷಣಾಧಿಕಾರಿಗಳು RMSA ಶಾಲೆಗಳ ವೇತನ ಬೇಡಿಕೆ ಸಲ್ಲಿಸುವಾಗ ಹೊಸದಾಗಿ ರಚನೆಯಾದ ತಾಲೂಕುಗಳಿಗೆ ಹಂಚಿಕೆಯಾದ ಪ್ರೌಢ ಶಾಲೆಗಳ ವೇತನ ಅನುದಾನದ ಬೇಡಿಕೆಯನ್ನು ಪ್ರತ್ಯೇಕವಾಗಿ ಹೊಸ ತಾಲೂಕು ಪಂಚಾಯತ್‌ಗೆ ನೀಡುವಂತೆ ಸಲ್ಲಿಸದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸುತ್ತಿದ್ದು, ಈ ಕುರಿತು ಹಲವಾರಿ ಬಾರಿ ಮನವಿ ಮಾಡಿದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಿಬ್ಬಂದಿಯವರು ನಿರ್ಲಕ್ಷ್ಯ ಮಾಡುತ್ತಿರುವುದರಿಂದ RMSA ಪ್ರೌಢ ಶಾಲಾ ಸಿಬ್ಬಂದಿಯವರು ವೇತನ ಇಲ್ಲದೇ ಪರಿದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಪ್ರಯುಕ್ತ ಸದರಿ ಸಮಸ್ಯೆಯನ್ನು ಒಂದು ವಾರದಲ್ಲಿ ಪರಿಹರಿಸಬೇಕು ಮತ್ತು ಈ ಪರಿಸ್ಥಿತಿ ಪದೇ ಪದೇ ನಿರ್ಮಾಣವಾಗಲು ಕಾರಣರಾದ ಸಿಬ್ಬಂದಿಯವರ ಮೇಲೆ ಕ್ರಮ ಜರುಗಿಸಬೇಕೆಂದು ಕೋರುತ್ತ, ಸಮಸ್ಯೆ ಬಗೆಹರಿಯದಿದ್ದಲ್ಲಿ ಅನಿವಾರ್ಯವಾಗಿ RMSA ಪ್ರೌಢ ಶಾಲಾ ಶಿಕ್ಷಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಹಾದಿ ಹಿಡಿಯಬೇಕಾಗುವ ಸಂದರ್ಭದ ಒದಗುತ್ತದೆ  ಇಂತಹ ಸಂದರ್ಭದಲ್ಲಿ ಶಿಕ್ಷಕರ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶೀಘ್ರದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಯಾಗುವಂತೆ ಮಾಡಬೇಕೆಂದು ಒತ್ತಾಯಿಸಿದರು.

ನಂತರ ಪ್ರತಿಭಟನೆ ನಿರತ ಶಿಕ್ಷಕರ ಸ್ಥಳಕ್ಕೆ ಆಯುಕ್ತರಾದ ಡಾ. ಆಕಾಶ ಆಗಮಿಸಿ ಮನವಿಯನ್ನು ಸ್ವಿಕರಿಸಿ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುತ್ತೆನೆ ಎಂದು ವಿಧಾನಪರಿಷತ್ ಸದಸ್ಯರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ಮಹೇಶ್ ಹೂಗಾರ, ಕಾರ್ಯದರ್ಶಿ ಜಮೀಲ್ ಅಹ್ಮದ್ ಉಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here