ಕಲಬುರಗಿ: ಬಡೇಪುರದಲ್ಲಿ ವಕ್ಫ್ ಆಸ್ತಿ ಆಕ್ರಮ ಮಾರಾಟಕ್ಕೆ ಯತ್ನ: ಎಚ್ಚರಿಕೆ ವಹಿಸಲು ಸೂಚನೆ

0
393

ಕಲಬುರಗಿ: ಬಡೇಪುರದಲ್ಲಿ ಆಕ್ರಮವಾಗಿ ವಕ್ಫ್ ಆಸ್ತಿ ಮಾರಟ ಮಾಡಿ ವಂಚನೆ ಮಾಡಲಾಗುತ್ತಿದ್ದು, ಸಾರ್ವಜನಿಕರು ವಂಚನೆಗೆ ಒಳಗಾಗಬೇಡಿ ಎಂದು ಕಲಬುರಗಿ ವಕ್ಫ್ ಇಲಾಖೆಯ ಜಿಲ್ಲಾ ಅಧಿಕಾರಿ ಹಜರತ ಅಲಿ ನದಾಫ್ ಎಚ್ಚರಿಕೆ ನೀಡಿದ್ದಾರೆ.

ಬಡೇಪುರ ಗ್ರಾಮದ ಸರ್ವೇ ನಂ.86, 88, 90, 91, 93 ಮತ್ತು 111 ಶುದ್ಧ ವಕ್ಫ್ ಆಸ್ತಿಯಾಗಿದ್ದು, ಕೆಲವರು ಈ ಆಸ್ತಿಯನ್ನು ಅಕ್ರಮವಾಗಿ ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಕುರಿತು ಇಲಾಖೆಯ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಒಂದು ವೇಳೆ ಸಾರ್ವಜನಿಕರು ಈ ಅಸ್ತಿ ಖರೀದಿಸಿದ್ದಲ್ಲಿ ಮುಂದಿನ ಕ್ರಮಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂದು ಪ್ರಕಟಣೆಯ ಮೂಲಕ ಸಾರ್ವಜನಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here