ವಚನಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ

0
64

ಗುವಿವಿ: ಶ್ರೀ. ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಆಚರಣೆ

ಕಲಬುರಗಿ : ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಶ್ರೀ. ಹಡಪದ ಅಪ್ಪಣ್ಣ ಒಬ್ಬರಾಗಿದ್ದರು. ಅವರ ಸಾಮಾಜಿಕ ಚಿಂತನೆಗಳು ಮತ್ತು ವಚನಗಳು ಮನುಕುಲದ ಉದ್ಧಾರಕ್ಕೆ ದಾರಿದೀಪವಾಗಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ. ಶಿವಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದಲ್ಲಿ ಶ್ರೀ. ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶ್ರೀ. ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.

Contact Your\'s Advertisement; 9902492681

ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂದು ಹೆಸರಾದ ‘ಅನುಭವ ಮಂಟಪ’ದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಡಪದ ಅಪ್ಪಣ್ಣ ತಮ್ಮ ಕಾಯಕ ನಿಷ್ಠೆ ಮತ್ತು ಮೌಲ್ಯಯುತ ವಚನಗಳಿಂದ ಬಸವಣ್ಣನವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಮಾಜದಲ್ಲಿನ ಅಜ್ಞಾನ, ಅಸಮಾನತೆ, ಜಾತಿ ಪದ್ಧತಿ, ಮೂಢನಂಬಿಕೆ ವಿರುದ್ಧ ಹೋರಾಡಿ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದರು. ಇವರ ಸಾಮಾಜಿಕ ಚಿಂತನೆಗಳು ವೈಚಾರಿಕ ಸಮಾಜಕ್ಕೆ ಚೈತನ್ಯ ನೀಡುತ್ತವೆ ಎಂದರು.

ಶ್ರೀ. ಶಿವಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ನಿರ್ದೇಶಕ ಡಾ. ಸುರೇಶ್ ಜಂಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಬೆಳವಣಿಗೆಗೆ ಅಗತ್ಯ ವೈಚಾರಿಕ ಚಿಂತನೆಗಳ ಮೂಲಕ ಬೆಳಕು ನೀಡಿದ ಶ್ರೀ. ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಅನಿಷ್ಠ ಜಾತಿ ಪದ್ಧತಿ ನಿರ್ಮೂಲನೆ ಮಾಡಿ ಜಾತಿರಹಿತ ಸಮಾಜ ನಿರ್ಮಾಣ ಮಾಡಲು ವಚನಗಳನ್ನು ರಚಿಸಿದರು ಬಸವಣ್ಣನವರ ವಚನಗಳಂತೆಯೇ ಹಡಪದ ಅಪ್ಪಣ್ಣ ಅವರ ವಚನಗಳಲ್ಲಿ ಕಾಯಕದ ಶ್ರೇಷ್ಠ ಭಕ್ತಿ ಮತ್ತು ಸಾಮಾಜಿಕ ಸಂದೇಶಗಳು ವೈಚಾರಿಕವಾಗಿವೆ. ಒಬ್ಬ ಕಾರ್ಯದರ್ಶಿಯಾಗಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಅಪ್ಪಣ್ಣನವರ ಕಾಯಕ ಸೇವೆಯಲ್ಲಿನ ಕಾರ್ಯಕ್ಷಮತೆ ಎದ್ದು ಕಾಣುತ್ತದೆ. ಅವರ ವಚನಗಳ ಕುರಿತು ಹೆಚ್ಚು ಅಧ್ಯಯನ ಸಂಶೋಧನೆ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾಮಂಡಲ ವಿಭಾಗದ ಸಹಾಯಕ ಕಚೇರಿ ಅಧೀಕ್ಷಕ ವೇದಕುಮಾರ್ ಪ್ರಜಾಪತಿ, ಆಡಳಿತ ವಿಭಾಗದ ಕಚೇರಿ ಅಧೀಕ್ಷಕ ಅಂಬಾರಾಯ ಬೆಲ್ಲದ್, ಶ್ರೀ. ಶಿವಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ಮಲ್ಲಿಕಾರ್ಜುನ ಹೊಸಮನಿ, ಜಗದೀಶ್, ಶಾಂತಗೌಡ ಪಾಟೀಲ್, ದಿಗಂಬರ್ ಪಡ್ನವೀಸ್ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ, ಮಲ್ಟಿಮೀಡಿಯಾ ಸಿಬ್ಬಂದಿ ಸಿದ್ದು ಸೇರಿದಂತೆ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here