ಶಾಲಾ ಮಕ್ಕಳಿಗೆ ಬಸವಣ್ಣನವರ ವಚನ ಸುಧೆ ಕೈಪಿಡಿ ವಿತರಣೆ

0
23

ಬಿ.ಆರ್. ಪಾಟೀಲರ 76ನೇ ಹುಟ್ಟುಹಬ್ಬದ ಆಚರಣೆ ನಿಮಿತ್ತ

ಕಲಬುರಗಿ: ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವುಗಳ ನಡುವಿನ ಬದುಕು ಮುಖ್ಯ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಗಳ ಸಲಹೆಗಾರ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಅವರ 76ನೇ ಹುಟ್ಟು ಹಬ್ಬದ ನಿಮಿತ್ತ ಸಾಸಿರ ನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಇಲ್ಲಿನ ಪ್ರಭುದೇವ ನಗರದ ನೀಲಕಂಠೇಶ್ವರ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ‌ಮಕ್ಕಳಿಗೆ ಬಸವಣ್ಣನವರ ವಚನ ಸುಧೆ ಕೈಪಿಡಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಸಮಾಜವಾದಿ ಹಿನ್ನಲೆಯ ಪಾಟೀಲರು ಈಗಿನ ಕಾಲದ ಅಪರೂಪದ ರಾಜಕಾರಣಿ ಎಂದರು.

Contact Your\'s Advertisement; 9902492681

ಬಿ.ಆರ್. ಪಾಟೀಲ ಅವರ ಜನ್ಮದಿನ ನಿಮಿತ್ತ ಶಾಲಾ ಮಕ್ಕಳಿಗೆ ವಚನ ಸಾಹಿತ್ಯದ ಅರಿವು ಮೂಡಿಸಲು ವಚನಸುಧೆ ಕಿರು ಹೊತ್ತಿಗೆ ಕೊಡುವ ಕಾರ್ಯ ಮಾದರಿಯಾಗಿದ್ದು, ಕನ್ನಡಕ್ಕೆ ಸತ್ವ ತಂದುಕೊಟ್ಟ ವಚನ ಸಾಹಿತ್ಯ ವಿಶ್ವದ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳಿದರು.

ಕಥೆಗಾರ ವಿಶ್ವನಾಥ ಭಕರೆ, ಗುತ್ತಿಗೆದಾರ ಪ್ರಭು ಪಾಣೇಗಾಂವ, ಪ್ರಮುಖರಾದ ನಾಗಣ್ಣ ನೀಲೂರೆ, ಪಂಡಿತರಾವ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಡಾ. ರಾಜಶೇಖರ ಪಾಟೀಲ ಹೆಬಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಷಣ್ಮುಖಯ್ಯ ಸ್ವಾಮಿ ನಿರೂಪಿಸಿದರು. ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here