ದೇಶದ ಭದ್ರತೆ ಹಾಗೂ ಜನರ ಬದುಕು ಕಟ್ಟಿಕೊಡುವ ಬಜೆಟ್

0
83

ಕಲಬುರಗಿ; ಈ ಬಾರಿಯ ಬಜೆಟನಲ್ಲಿ ರೈತರು, ಮಹಿಳೆಯರು ಮತ್ತು ಯುವಕರಿಗೆ,ರಕ್ಷಣಾ ವಲಯಕ್ಕೆ ಹೆಚ್ಚಿನ ಒತ್ತು, ಕೃಷಿ ಸಾಲ ಹೆಚ್ಚಳ, ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಧ್ಯಮವರ್ಗದವರಿಗೆ ಆದಾಯ ತೆರಿಗೆ ಭಾರ ಕಡಿಮೆ ಮಾಡಲಾಗಿದೆ. ಇದೊಂದು ದೇಶದ ಭದ್ರತೆ ಹಾಗೂ ಜನರ ಬದುಕು ಕಟ್ಟಿಕೊಡುವ ಬಜೆಟ್ ಆಗಿದೆ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ೧೦ ಲಕ್ಷ ರೂ. ಸಾಲ, ೨೦ಲಕ್ಷ ಯುವಕರಿಗೆ ಕೌಶಲ ತರಬೇತಿ, ವಾತ್ಸಲ್ಯ ಯೋಜನೆಯಡಿ ಅಪ್ರಾಪ್ತರಿಗೆ ಪಿಂಚಣಿ, ಕೌಶಲ್ಯ ಯೋಜನೆಯಡಿ ೭.೫ ಲಕ್ಷದ ವರೆಗೆ ಸಾಲ, ೧೦೦೦ ಕೈಗಾರಿಕೆ ಮೇಲ್ದರ್ಜೆಗೇರಿಸುವುದು, ಕೌಶಲ್ಯ ತರಬೇತಿಗೆ ಹೊಸ ಕೋರ್ಸ್ ಪರಿಚಯಿಸಿರುವುದು,ಕೃಷಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು,ಮಹಿಳಾ ಉದ್ಯೋಗಿಗಳಿಗೆ ಹೊಸ ಅವಕಾಶಗಳು, ಉದ್ಯೋಗ ಸೃಷ್ಠಿಗೆ ಹೊಸ ಆಯಾಮ ನೀಡಿರುವುದು, ಮುದ್ರಾ ಯೋಜನೆ ಸಾಲವನ್ನು ೨೦ ಲಕ್ಷಕ್ಕೆ ಏರಿಸಿರುವುದು, ಸೋಲಾರ ಪ್ಯಾನಲ್ಗಳ ಮೇಲಿನ ತೆರಿಗೆ ಇಳಿಕೆ, ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದೊಂದು ಜನರ ಬದುಕು ಕಟ್ಟಿಕೊಡುವ ಬಜೆಟ್ ಆಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here