ಹೋಬಳಿ ಮಟ್ಟದ ಕ್ರೀಡಾಕೂಟವನ್ನು ದೈಹಿಕ ಶಿಕ್ಷಕರು ಯಶಸ್ವಿಗೊಳಿಸಲು ಕರೆ

0
221

ಶಹಾಬಾದ: ತಾಲೂಕಿನಲ್ಲಿ ೨೦೨೪- ೨೫ ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಅಗಸ್ಟ ೨೧ರಿಂದ ಅಗಸ್ಟ ೨೬ ವರೆಗೆ ಆಯೋಜಿಸಲಾಗಿದ್ದು, ಈ ಕ್ರೀಡಾಕೂಟವನ್ನು ಎಲ್ಲಾ ದೈಹಿಕ ಶಿಕ್ಷಕರು ಸೇರಿಕೊಂಡು ಯಶಸ್ವಿಗೊಳಿಸಬೇಕೆಂದು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಕರೆ ನೀಡಿದರು.

ಅವರು ಮಂಗಳವಾರ ನಗರದ ಎಸ್.ಜಿ.ವರ್ಮಾ ಪ್ರೌಢಶಾಲೆಯಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟದ ಅಂಗವಾಗಿ ಆಯೋಜಿಸಲಾದ ಪೂರ್ವಭಾವಿ ಸಭೆಯಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರದ ಬಿ.ವಿ.ಎಂ. ಶಾಲೆ ಮೈದಾನ(ರೈಲ್ವೆ ಮೈದಾನ)ದಲ್ಲಿ ಹೋಬಳಿ ಮಟ್ಟದ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಅಗಸ್ಟ ೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಗುಂಪು ಆಟಗಳು ಹಾಗೂ ಅಗಸ್ಟ ೨೨ ರಂದು ಅಥ್ಲೆಟಿಕ್ಸ್ ಆಟಗಳು ನಡೆಯಲಿವೆ.

Contact Your\'s Advertisement; 9902492681

ಶಹಾಬಾದ ನಗರ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಅಗಸ್ಟ ೨೩ ಬೆಳಿಗ್ಗೆ ೧೦ ಗಂಟೆಗೆ ಗುಂಪು ಆಟಗಳು ಹಾಗೂ ಅಗಸ್ಟ ೨೪ರಂದು ಅಥ್ಲೆಟಿಕ್ಸ್ ಆಟಗಳು ನಡೆಯಲಿವೆ.

ಶಹಬಾದ ಗ್ರಾಮೀಣ ಪ್ರಾಥಮಿಕ ಕ್ರೀಡಾಕೂಟವನ್ನು ಅಗಸ್ಟ ೨೬ ರಂದು ಗುಂಪು ಆಟ ಮತ್ತು ಅಥ್ಲೆಟಿಕ್ಸ್ ಗಳು ಒಂದೇ ದಿನ ನಡೆಯುತ್ತವೆ.ಆದ್ದರಿಂದ ಅಗಸ್ಟ ೨೧ರ ಒಳಗಾಗಿ ಎಲ್ಲಾ ದೈಹಿಕ ಶಿಕ್ಷಕರು ಮೈದಾನದ ಸಿದ್ಧತೆ ಮಾಡಿಕೊಳ್ಳಬೇಕು.ಅಲ್ಲದೇ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ಮಕ್ಕಳ ಪಟ್ಟಿಯನ್ನು ಹಾಗೂ ನೊಂದಣಿ ಶುಲ್ಕವನ್ನು ನಿಗದಿತ ಅಗಸ್ಟ ೧೪ ರ ಒಳಗಾಗಿ ದಿನಾಂಕದೊಳಗೆ ಕ್ರೀಡಾಕೂಟದ ಸಂಘಟಕರಿಗೆ ಸಲ್ಲಿಸಬೇಕು ಎಂದು ಹೇಳಿದರು.

ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ೭೮೯೨೬೫೨೨೧೨, ೯೪೪೯೧೨೪೦೯೩ ರವರನ್ನು ಸಂಪರ್ಕಿಸಲು ತಿಳಿಸಿದರು.

ದೈಹಿಕ ಶಿಕ್ಷಕ ಮತ್ತು ಕ್ರೀಡಾಕೂಟದ ಸಂಘಟಕರಾದ ಬನ್ನಪ್ಪ ಸೈದಾಪೂರ ಮಾತನಾಡಿ, ಕ್ರೀಡಾಕೂಟಕ್ಕೆ ಬರುವ ಮಕ್ಕಳ ವಿಶೇಷ ಗಮನಹರಿಸಿ.ಮಕ್ಕಳಿಗೆ ಏನಾದರೂ ತೊಂದರೆಯಾದರೆ ಎಲ್ಲರಿಗೂ ತೊಂದರೆಯಾಗುತ್ತದೆ.ಅಲ್ಲದೇ ಮೈದಾನದಲ್ಲಿ ಶಿಸ್ತು ಕಾಪಾಡಲು ತಿಳಿಸಿ.ಯಾವುದೇ ತೊಂದರೆಯಾಗದAತೆ ಕ್ರೀಡಾಕೂಟವನ್ನು ಯಶಸ್ವಿಗೊಳಿಸ;ಲು ಸಹಕರಿಸಿ ಎಂದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ದೇವೆಂದ್ರ ರೆಡ್ಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಚಿದಾನಂದ ಕುಡ್ಡನ್, ಕ.ರಾ.ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿ ಸಂತೋಷ ಸಲಗರ್, ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ್ ಮಾತನಾಡಿದರು. ಗ್ರೇಡ್-೧ ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಿಜಯಲಕ್ಷಿö್ಮ,ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ, ಹಿರಿಯ ಮುಖ್ಯಗುರುಗಳಾದ ಪಾರ್ವತಿ ಮೌರ್ಯ ಸೇರಿದಂತೆ ಅನೇಕರು ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here