ವಿಕಸಿತ ಭಾರತದ ಅನ್ವೇಷಣೆಗೆ ಮುನ್ನುಡಿ ಬರೆದ ಬಜೆಟ್: ಶಶೀಲ್ ಜಿ ನಮೋಶಿ

0
52

ಕಲಬುರಗಿ: ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024-25ನೇ ಸಾಲಿನ ಮುಂಗಡ ಪತ್ರ ವಿಕಸಿತ ಭಾರತ ಅನ್ವೇಷಣೆ ಗೆ ಮುನ್ನುಡಿ ಬರೆದಿದೆ.

ದೇಶದ ಬಡವರ, ಮಹಿಳೆಯರ, ಯುವಕರ ಹಾಗೂ ರೈತರ ಈ ನಾಲ್ಕು ಸ್ಥಂಭಗಖ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ಬಜೆಟ್ ದಲ್ಲಿವೆ. ಪ್ರಮುಖವಾಗಿ ದೇಶದ ಆರ್ಥಿಕ ಭದ್ರತೆ ಗೆ ಬುನಾದಿ ಹಾಕಿದಂತಿದೆ.

Contact Your\'s Advertisement; 9902492681

5000 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನಶಿಪ್, ಪಿಎಂ ಅವಾಸದಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ಅನುದಾನ, 1 ಕೋಟಿ ಮನೆಗಳಿಗೆ ಸೋಲಾರ ಪ್ಯಾನೆಲ್ ಯೋಜನೆ, ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರದ ಅಭಿವೃದ್ಧಿ ಗೆ 1.53 ಲಕ್ಷ ಕೋಟು ಅನುದಾನ ಸೇರಿ ಇತರ ಕಾರ್ಯಗಳು ಅಭಿವೃದ್ಧಿ ಪೂರಕವಾಗಿವೆ.

ಕೃಷಿ , ಉದ್ಯೋಗ ಮತ್ತು ಕೌಶಲ್ಯ, ಮಾನವ ಸಂಪನ್ಮೂಲ- ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆ,ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ, ನಾವಿನ್ಯತೆ ಹಾಗೂ ಹೊಸ ಪೀಳಿಗೆ ಸುಧಾರಣೆ ಎಂಬುದಾಗಿ 9 ಆದ್ಯತಾ ವಲಯಗಳೆಂದು ಗುರುತಿಸಿರುವುದು ಹೊಸ ಮೈಲುಗಲ್ಲಾಗಿದೆ.

ರಾಜಕುಮಾರ ಪಾಟೀಲ್, ಮಾಜಿ ಶಾಸಕರು, ಸೇಡಂ ಕ್ಷೇತ್ರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here