ಕೆಎಚ್‌ಬಿ ಗ್ರೀನ್ ಪಾರ್ಕ್ ಬಡಾವಣೆಯ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ

0
119

ಕಲಬುರಗಿ: ಕೆಎಚ್‌ಬಿ ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಡಾವಣೆಯ ಮೂಲಭೂತ ಸಮಸ್ಯೆಗಳನ್ನು ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಡಾವಣೆಯ ಮೂಲಭೂತ ಸೌಲಭ್ಯಗಳಾದ ನೀರಿನ ಸಮಸ್ಯೆ, ರಸ್ತೆಯ, ವಿದ್ಯುತ್ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ ಅಲ್ಲದೆ ಬಡಾವಣೆಯಲ್ಲಿ ರಾಜಾರೋಷವಾಗಿ ಬೀದಿ ನಾಯಿಗಳು ಮಹಿಳೆಯರಿಗೆ, ವಯಸ್ಕರರಿಗೆ ಹಾಗೂ ಮಕ್ಕಳಿಗೆ ತಿರುಗಾಡದಂತೆ ತೊಂದರೆ ಮಾಡುತ್ತಿವೆ. ಈ ಬಡಾವಣೆಯಲ್ಲಿ ಸುಮಾರು ಮೂರು ಸಾವಿರ ಜನಸಂಖ್ಯೆಗಿಂತಲೂ ಹೆಚ್ಚಿದ್ದು ಅತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯು ಇಲ್ಲ, ಇತ್ತ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಲ್ಲ ಅತಂತ್ರ ಸ್ಥಿತಿಯಲ್ಲಿ ಸಮಸ್ಯೆಯ ಸುಳಿಯಲ್ಲಿ ಜನರು ಬದುಕು ಸಾಗಿಸುತ್ತಿದ್ದಾರೆ.

Contact Your\'s Advertisement; 9902492681

ಯಾವುದೇ ಸಮಸ್ಯೆ ಇದ್ರೆ ನಾವು ಯಾರಿಗೆ ಕೇಳಬೇಕೆಂಬುದೇ ತಿಳಿಯದಾಗಿದೆ. ಮಹಾನಗರ ಪಾಲಿಕೆಯ 9ನೇ ವಾರ್ಡ ನಲ್ಲಿ ಹಾಗೂ ಉತ್ತರ ಮತಕ್ಷೇತ್ರದಲ್ಲಿ ಈ ಕಾಲೋನಿ ಬರುತ್ತದೆ. ಚುನಾವಣೆಯ ಸಮಯದಲ್ಲಿ ಜನಪ್ರತಿನಿಧಿಗಳು ಬಂದಾಗ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೇಳಿ ಹೋಗುತ್ತಾರೆ. ಬಡಾವಣೆಯ ಅನೇಕ ಜನರು ಸೇರಿ ಜನ ಪ್ರತಿನಿಧಿಗಳಿಗೂ ಮಹಾನಗರ ಪಾಲಿಕೆಯ ಆಯುಕ್ತರಿಗೂ ಹಲವಾರು ಬಾರಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.

ಬಡಾವಣೆಯ ಜನರು ಕೇವಲ ಭರವಸೆಗಳೊಂದಿಗೆ ಸಮಸ್ಯೆಗಳ ಜೊತೆಗೆ ಜೀವನ ಸಾಗಿಸುತ್ತಿದ್ದಾರೆ. ಸಮಸ್ಯೆಗಳು ಪರಿಹರಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು. ಮಾನ್ಯ ಆಯುಕ್ತರು ಮನವಿ ಪತ್ರ ಸ್ವೀಕರಿಸಿ ಬೇಗ ನಮ್ಮ ವ್ಯಾಪ್ತಿಗೆ ಒಳಪಡಿಸಿಕೊಂಡು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುತ್ತೇವೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಂಜುಕುಮಾರ ಶೆಟ್ಟಿ, ಕಾರ್ಯದರ್ಶಿಗಳಾದ ಚಂದ್ರಕಾಂತ ತಳವಾರ, ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ಬುಜ್ಜಿ, ಕಾನೂನು ಸಲಹೆಗಾರರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಮಾರ್ಗದರ್ಶಕರಾದ ಸಂಗಮೇಶ್ವರ ಸರಡಗಿ, ರಾಘು ಪಾಲನೆಯ, ನಿವಾಸಿಗಳಾದ ಕೆ ವಿ ಕುಲಕರ್ಣಿ, ಪದ್ಮಣ್ಣ ವಗ್ಗೆ, ನಾಗಭೂಷಣ ಸ್ವಾಮಿ, ಶಿವಾನಂದ ಪಾಟೀಲ, ಹಣಮಂತರಾಯ ಬಿರಾದಾರ, ರಾಜಶೇಖರ ಜಕ್ಕಾ, ಜೀತೇಂದ್ರಸಿಂಗ ಠಾಕೂರ ಸೇರಿದಂತೆ ಬಡಾವಣೆಯ ಅನೇಕ ಜನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here