ಕಲಬುರಗಿ: ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಷನ್ (ಎಎಸ್‌ಎ) ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸುವರ್ಣ ಕನ್ನಡ ಭವನದಲ್ಲಿ, ರಾಜಶ್ರೀ ಛತ್ರಪತಿ ಶಾಹುಜಿ ಮಹಾರಾಜರವರ ೧೫೧ನೇ ಜನ್ಮದಿನದ ಅಂಗವಾಗಿ “ಹಿಂದುಳಿದ ವರ್ಗ(ಒಬಿಸಿ)ಗಳ ಮೀಸಲಾತಿ ಮುಂದಿರುವ ಸವಾಲುಗಳು” ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಜುಲೈ ೨೭.ರಂದು ಶನಿವಾರ ಬೆಳಗ್ಗೆ ೧೧:೦೦ ಗಂಟೆಗೆ ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ. ಲಕ್ಷ್ಮಣ ರಾಜನಾಳಕರ್‌ರವರು ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಶಿವಸುಂದರ ಖ್ಯಾತ ಚಿಂತಕರು, ಬೆಂಗಳೂರು ಹಾಗೂ ಪಿ. ಆರಡಿಮಲ್ಲಯ್ಯ ಕಟ್ಟೆರ ಸಂಶೋಧಕರು, ಶಿವಮೊಗ್ಗ ಭಾಗವಹಿಸಲಿದ್ದಾರೆ.
ಅದರಂತೆ ಜಿಲ್ಲೆಯ ವಿವಿಧ ವರ್ಗ/ಸಮುದಾಯಗಳ ಮುಖಂಡರು, ಅಧಿಕಾರಿಗಳು ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ಏಕಲೂರೆ ರವರು ವಹಿಸುವರು ಎಂದು ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಷನ್ (ಎಎಸ್‌ಸಿ) ಕರ್ನಾಟಕ ಜಿಲ್ಲಾ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.