ಕಲಬುರಗಿ; ನಗರದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವತಿಯಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ “ಪರಿಚಯ” ಎಂಬ ಸ್ವಾಗತ ಸಮಾರಂಭವನ್ನು ಡಾ. ಎಸ್.ಎಮ್ ಪಂಡಿತ ರಂಗಮAದಿರದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ. ನರೇಂದ್ರ ಬಡಶೇಷಿ, ಸಂಸ್ಥೆಯ ಅಧ್ಯಕ್ಷರಾದ ಖ್ಯಾತ ವೈದ್ಯ ಡಾ. ಕೆ.ವಿಜಯ ಮೋಹನ್, ಕಾರ್ಯದರ್ಶಿಗಳಾದ ಕೆ.ಎನ್ ಕುಲಕರ್ಣಿ, ನಿರ್ದೇಶಕರು ಮತ್ತು ಪ್ರಾಚಾರ್ಯ ಡಾ. ಭುರ್ಲಿ ಪ್ರಹ್ಲಾದ ಹಾಗೂ ಜ್ಯೋತಿ. ಪಿ. ಭುರ್ಲಿ ಅವರು ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರೋ. ನರೇಂದ್ರ ಬಡಶೇಷಿ ಮಾತನಾಡಿ ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ಕಠಿಣ ಪರಿಶ್ರಮ ಅಗತ್ಯ, ವಿದ್ಯಾರ್ಥಿಗಳು ಸಾಧನೆಯ ಶಿಖರ ತಲುಪಬೇಕಾದರೆ ಕಠಿಣ ಪರಿಶ್ರಮ ಅಗತ್ಯವಾಗಿದೆ. ಪಾಲಕರು ತುಂಬಾ ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳು ಪಾಲಕರ ಕಷ್ಟವನ್ನು ಅರಿತು ಚನ್ನಾಗಿ ಅಭಾಸ ಮಾಡಿದಾಗ ಪಾಲಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ. ಎಂದರು.
ಡಾ. ಕೆ. ವಿಜಯ ಮೋಹನ್ ಅವರು ಹಿರಿಯರ ಸಲಹೆ ಪಡೆದು ಕಾರ್ಯನ್ಮುಖರಾಗಿರಿ. ಡಾ| ಭುರ್ಲಿ ಅವರು ಶ್ರಮ ಜೀವಿಗಳು ಪ್ರತಿಭಾವಂತರು ಸಮಯಪ್ರಜ್ಞೆಗೆ ಉದಾಹರಣೆಯಾಗಿದ್ದಾರೆ. ಆರ್.ಜೆ ಕಾಲೇಜು ರಾಜ್ಯ, ದೇಶ ಮಟ್ಟದಲ್ಲಿ ಮಾದರಿಯಾಗಿ ಈ ಕಾಲೇಜು ಬೆಳೆಯುತ್ತದೆ ಎಂದು ಹಾರೈಸಿದರು.
ಡಾ. ಭುರ್ಲಿ ಪ್ರಹ್ಲಾದ ಅವರು ವಿದ್ಯಾರ್ಥಿಗಳಿಗೆ “ಪುಸ್ತಕ ಹಿಡಿ ಮೊಬೈಲ್ ಬಿಡಿ” ಎಂದು ಕಿವಿಮಾತು ಹೇಳಿ, ಕಡಿಮೆ ಅವಧಿಯಲ್ಲಿಯೇ ಆರ್.ಜೆ ಪಿ.ಯು ಕಾಲೇಜು ಸ್ಪರ್ದಾತ್ಮಕ ಯುಗದಲ್ಲಿ ಉತ್ತಮ ಸಾಧನೆ ಮಾಡಲು ನಮ್ಮ ಉಪನ್ಯಾಸಕರ ಶ್ರಮ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ವೈಷಾಲಿ ದೇಶಪಾಂಡೆ, ಟಿ. ನವೀನಕುಮಾರ್, ಪ್ರಕಾಶ ಕಾಂತೀಕರ, ಡಿ. ಕೊಂಡಲರಾವ್, ಪ್ರಕಾಶ ಚವ್ಹಾಣ, ದಿವ್ಯಾ ಪಟವಾರಿ, ಶಾಂತೇಶ ಹುಂಡೇಕಾರ ಮುಂತಾದವರು ಇದ್ದರು. ಕಾಲೇಜಿನಲ್ಲಿ ಅಭ್ಯಾಸ ಮಾಡಿ ನೀಟ್, ಜೆ.ಇ.ಇ ಮತ್ತು ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮ ನಿರೂಪಣೆ ಕೇದಾರ ದೀಕ್ಷಿತ್, ಸ್ವಾಗತ ಭಾಷಣ ಅಜಯ್‌ದತ್ತ, ವಂದನಾರ್ಪಣೆಯನ್ನು ಸೋನಿಯಾ ಕೆ ಅವರು ನಡೆಸಿಕೊಟ್ಟರು.