ಕಲಬುರಗಿ: ಬಿದರ ನಗರದ ನೌಬಾದ ಕ್ರಾಸ್ ಹಿತ್ತಿರದ ರಿಂಗ ರೊಡ ಬಳಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ ನೇತೃತ್ವದಲ್ಲಿ “ಕಾರ್ಗಿಲ ವಿಜಯ ದಿವಸ ” ನಿವೃತ್ತ ಯೋಧರಿಗೆ ಸನ್ಮಾನಿಸಿ ದೇಶಬಾಂಧವರಿಗೆ ಸಿಹಿಯಾದ ಮೊಸಂಬಿ ಜ್ಯೂಸ್ ಹಂಚುವುದರ ಮೂಲಕ ಪರಮ ಪೂಜ್ಯರು ದೇಶಬಾಂಧವರೊAದಿಗೆ ಆಚರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ರಾಷ್ಟೀಯ ವಕ್ತಾರ ವೈಜನಾಥ ಎಸ್ ಝಳಕಿ “ದೇಶದ ರಕ್ಷಣೆಗಾಗಿ ದೇಶಬಾಂಧವರು ತಮ್ಮ ತಮ್ಮ ಜಾತಿ, ಧರ್ಮ , ಪಕ್ಷ ಪರಿವಾರವನ್ನು ಬದಿಗಿಟ್ಟು ಸರ್ವಧಮ೯ ಸಮಾಭಾವ, ನಿಸರ್ಗ ನಿಯಮಗಳು ಹಾಗು ಸಂವಿಧಾನದ ತತ್ವ ಸಿದ್ಧಾಂತಗಳನ್ನು ಪಾಲಿಸುವಂತೆ ಪರಮ ಪೂಜ್ಯರು ದೇಶ ಬಾಂಧವರಿಗೆ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ದೇಶದ ಹೊರಗಿನ ಶತ್ರುಗಳ ವಿರುದ್ಧ ಹೊರಾಡಿ ನಮ್ಮ ದೇಶದ ಗಡಿ ಕಾಯಲು ಸೈನಿಕರು ಸದಾ ಸನ್ನದ್ದರಾಗಿದ್ದು ಮೊತ್ತೊಮೆ ಕಾರ್ಗಿಲ ಕಾಳಗದಂತ ಘಟನೆಗಳು ಪುನರಾವರ್ತನೆ ಆಗದಂತೆ ತಡೆಯಲು ಪ್ರಸ್ತುತ ದೇಶದೊಳಗಿನ ದೇಶ ದ್ರೋಹಿಗಳ ವಿರುದ್ಧ ಹೊರಾಡಲು ಸಮಸ್ತ ದೇಶಬಾಂಧವರು ಎಕತೆ, ಐಕ್ಯತೆ ಹಾಗೂ ಭೂವೈಕ್ಯತೆಯಿಂದ ಇದ್ದು ಸೈನಿಕರಂತೆ ದೇಶದ ರಕ್ಷಣೆ ಮಾಡಬೆಕಾಗಿ ಯಾವುದು ತುಂಬಾ ಅವಶ್ಯಕ ವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಸದಾನಂದ ಜೋಷಿ, ಗುರುಸಿದ್ದಪ್ಪ ಬೆನಕನಳ್ಳಿ , ಪಪ್ಪು ಪಾಟೀಲ ಖಾನಾಪುರ, ವಿಷ್ಣು, ವಿಶ್ವಾ ಕೋಳಾರ, ಅನಿಲ ಆಲ್ಮಾ , ಮಲ್ಲು, ಖುಷಿ, ಶಿವಕುಮಾರ, ಅರುಣ, ಉಮೇಶ ಸೇರಿದಂತೆ ಅನೇಕ ಮುಖಂಡರು ಹಾಗು ಕಾರ್ಯಕರ್ತರು ಉಪಸ್ತಿತರಿದ್ದರು.