ಕಲಬುರಗಿ: ಜಿಲ್ಲೆಯಲ್ಲಿ ೨೦೨೪ – ೨೫ ನೆ ಖರಿಪ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ (PMFBY) ಅಡಿ ರೈತರು ತೊಗರಿ, ಉದ್ದು, ಹೆಸರು ಸೇರಿದಂತೆ ಇನ್ನಿತರ ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಕಂತು ಪಾವತಿಸಿ ಬೆಳೆ ವಿಮೆ ಮಾಡಿಸಲು ಜುಲೈ ೩೧ರ ವರೆಗೆ ಸರಕಾರ ಸಮಯ ನಿಡಿದ್ದು, ಆದರೆ ಇಲ್ಲಿಯವರೆಗೂ ಜಿಲ್ಲೆಯ ಸುಮಾರು ೭೦% ಕ್ಕೂ ಅಧಿಕ ರೈತರಿಗೆ ಈ ವಿಮಾ ಯೋಜನೆ ಬಗ್ಗೆ ಸಮರ್ಪಕ ವಾದ ಮಾಹಿತಿ ಹಾಗೂ ಅರಿವು ದೊರೆತಿಲ್ಲ ಬೆಳೆ ವಿಮಾ ಕಂತು ಪಾವತಿಸುವ ಅವಧಿ ಅಗಸ್ಟ ೧೫ರ ವರೆಗೆ ವಿಸ್ತರಿಸುವಂತೆ ಮಾಹತ್ಮ ಗಾಂಧಿಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವೈಜನಾಥ ಎಸ್ ಝಳಕಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಏಕೆಂದರೆ ಈ ವಿಯಾ ಯೋಜನೆಯ ಸಮರ್ಪಕ ಅನುಷ್ಟಾನಗೊಳಿಸ ಸುವ ಜವಬ್ದಾರಿ / ಟೆಂಡರ್ ಪಡೆದ ಸಂಭದ ಪಟ್ಟ ಬೆಳೆ ವಿಮಾಕಂಪನಿ ಜಿಲ್ಲೆಯ ರೈತರಿಗೆ ಬೆಳೆವಿಮಾ ಕುರಿತು ಜಾಗ್ರತಿ, ಅರಿವು ಮೂಡಿಸುವ ಕಾರ್ಯ ಗ್ರಾಮ ಮಟ್ಟದಿಂದ ಮಾಡುತ್ತಿಲ್ಲ , ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ಮಾಡಿಸಿ ಈ ಮಹತ್ವಕಾಂಕ್ಷಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲಾಗುತ್ತಿಲ್ಲ.
ಈ ಹಿಂದೆ ಕಳೆದ ವರ್ಷ ೨೦೨೩ – ೨೪ ನೆ ಸಾಲಿನಲ್ಲಿಯೂ ಕೊಡ ಸಂಬAದ ಪಟ್ಟ ಯುನಿವರ್ಸಲ ಸೋಂಪೋ ಬೆಳೆ ವಿಮಾ ಕಂಪನಿ ಜಿಲ್ಲೆಯ ರೈತರಿಗೆ ಬೆಳೆವಿಮಾ ಯೋಜನೆ ಬಗ್ಗೆ ಸಮರ್ಪಕ ವಾಗಿ ಗ್ರಾಮ ಮಟ್ಟದಿಂದ ಅರಿವು ಮೂಡಿಸುವಲ್ಲಿ ವಿಫಲರಾದ ಕಾರಣ ಜಿಲ್ಲೆಯ ಒಟ್ಟು ರೈತರಲ್ಲಿ ಶೆಕಡ ೬೦% ಕ್ಕು ಅಧಿಕ ರೈತರು ತಿವ್ರ ಬರಗಾಲದಿಂದ ತಾವು ಬೆಳೆದ ಬೆಳೆ ಹಾನಿ ಯಾದರು ಸಹ (PMFBY) ಯೋಜನೆಯ ಸದುಪಯೋಗ ಪೂರ್ಣಪ್ರಮಾಣದಲ್ಲಿ ಪಡೆದು ಕೊಳ್ಳಲಾಗಿಲ್ಲ ಹಾಗೂ ಈ ಬಾರಿ ನಮ್ಮ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬರುತ್ತಿರುವ ನಿರಂತರ ಮಳೆಯಿಂದಲು ಸಹ ಜಿಲ್ಲೆಯ ಅನೇಕ ರೈತರು ಇನ್ನು ತಮ್ಮ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಆಗಿಲ್ಲ, ಅದಕ್ಕಾಗಿ ಜಿಲ್ಲಾಧಿಕಾರಿಗಳು ಜುಲೈ ೩೧, ೨೦೨ ಕ್ಕೆ ಕೊನೆಗೊಳ್ಳುವ ಬೆಳೆ ವಿಮೆ ಕಂತು ಪಾವತಿಸುವ ಅವಧಿ ಆಗಸ್ಟ್ ೧೫ , ೨೦೨೪ ರವರೆಗೆ ವಿಸ್ತರಿಸಿಬೇಕು ಆಗ್ರಹಿಸಿದ್ದಾರೆ.
ಕೂಡಲೆ ಸಂಬAಧಿಸಿದ ಬೆಳೆ ವಿಮಾ ಕಂಪನಿಗೆ ಜಿಲ್ಲೆಯ ರೈತರಿಗೆ ಗ್ರಾಮ ಮಟ್ಟದಿಂದಲೆ ಬೆಳೆ ವಿಮಾ ಯೋಜನೆ ಬಗ್ಗೆ ಸುಕ್ತ ಅರಿವು, ಜಾಗ್ರತಿ ಹಾಗೂ ನೆರವು ನೀಡಲು ಕಟ್ಟುನಿಟ್ಟಾಗಿ ಸೂಚಿಸಿ ರೈತರ ಹಿತ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಬೆಳೆವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಟನ ಗೊಳಸಿ ರೈತರ ಹಿತ ಕಾಪಾಡಬೇಕಾಗಿ ಮನವಿ ಪತ್ರದಲ್ಲಿ ಮನವಿ ಮಾಡಿದ್ದಾರೆ.