ಕಲಬುರಗಿ: ಜುಲೈ 29 ರಂದು, ಸೋಮವಾರ ಮಧ್ಯಾನ್ಹ 3. ಕ್ಕೆ ಕಲಬುರಗಿಯ ಸರದಾರ ವಲ್ಲಭಭಾಯಿ ಪಟೇಲ ಚೌಕ ಹತ್ತಿರ ವಿರುವ, ಜಿಲ್ಲಾ ಕ.ಸಾ.ಪ ದ, ಸುವರ್ಣ ಕನ್ನಡ ಭವನದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ, (ಸಂಪುಟ ದರ್ಜೆ) ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ ರವರಿಗೆ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಅದ್ಧುರಿಯಾಗಿ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರು ಮತ್ತು ವಕೀಲರಾದ ಮಾಹಂತೇಶ ಕೌಲಗಿ ಅವರ ನೈತ್ರುತ್ವದಲ್ಲಿ ಹಾಗೂ ಅಧ್ಯಕ್ಷತೆಯಲ್ಲಿ ಗೌರವ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮ ಯೇಶಸ್ವಿ ಗೊಳಿಸಲು ಎಲ್ಲಾ ಹಿಂದುಳಿದ ಸಮಾಜ ಸಂಘಗಳ ಪಧಾದಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೆನವೇರಿ ವಿನೋದ ಕುಮಾರ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.