ವಿದ್ಯಾರ್ಥಿಗಳು ಪರಿವರ್ತಕರಾಗಬೇಕು: ಡಾ.ನವಲೆ

0
100

ಕಲಬುರಗಿ: ವಿದ್ಯಾರ್ಥಿನಿಯರು ಯಾವಾಗಲೂ ಪರಿವರ್ತನೆಯ ಕಡೆಗೆ ಚಲಿಸಬೇಕು. ಯಥಾಸ್ಥಿತಿಗೆ ಹೊಂದಿಕೊಂಡರೆ ಬದುಕು ಬದಲಾಗುವುದಿಲ್ಲ ಎಂದು ವಿಧಿವಿಜ್ಞಾನ ಅಧಿಕಾರಿ ಡಾ.ದಿಲೀಪ ನವಲೆ ಅಭಿಪ್ರಾಯಪಟ್ಟರು.

ಬುದ್ಧ ಬಸವ ಡಾ.ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ನಗರದ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಯಥಾಸ್ಥಿತಿ ಮನಸ್ಥಿತಿ ಮತ್ತು ಪರಿವರ್ತನ ಮನಸ್ಥಿತಿಯ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು.

Contact Your\'s Advertisement; 9902492681

ಈ ದೇಶದಲ್ಲಿ ಬುದ್ಧನ ನಂತರ ಪರಿವರ್ತನಾ ಮನಸ್ಥಿತಿ ಶುರುವಾಯಿತು. ನಂತರ ಬಂದ ಬಸವೇಶ್ವರˌ ಡಾ.ಅಂಬೇಡ್ಕರ್ ಅವರು ಕೂಡ ಪರಿವರ್ತನ ಮನಸ್ಥಿತಿಯವರಾಗಿದ್ದರು.

ಇಡೀ ನಮ್ಮ ಸಂವಿಧಾನ ಪರಿವರ್ತನೆಯ ಹಾದಿಯಲ್ಲಿ ರಚನೆಯಾಗಿದೆ. ಆದರೆ ಯಥಾಸ್ಥಿತಿ ಮನಸ್ಥಿತಿ ವ್ಯವಸ್ಥೆಯನ್ನು ಹಾಗೆ ಇರಿಸಲಾಗುತ್ತದೆ. ಬಂಧನದ ಸ್ಥಿತಿಯನ್ನು ಇಂದಿನ ವಿದ್ಯಾರ್ಥಿಗಳು ಕಿತ್ತೆಸೆಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಅನೀಲಕುಮಾರ ಹಾಲುˌ ಇಂದಿನ ಯುವತಿಯರಿಗೆ ಮನಸ್ಥಿಗಳ ಬಗ್ಗೆ ಜಾಗ್ರತಿ ಇರಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಕಟ್ಟುಪಾಡುಗಳಿಂದ ಹೊರಬಂದು ಉತ್ತಮ ಸಾಧಕರಾಗಬೇಕು ಎಂದರು. ಡಾ. ಪ್ರಕಾಶ ಎಂ ಮೋರಗೆ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ.ಮಲ್ಲಿಕಾರ್ಜುನ ಶೆಟ್ಟಿ ಸ್ವಾಗತಿಸಿದರು. ಡಾ.ಪ್ರಕಾಶ ಬಡಿಗೇರ ಅತಿಥಿ ಪರಿಚಯ ಮಾಡಿದರು. ಡಾ.ಅಶೋಕ ಸಪಳೆ ನಿರೂಪಿಸಿದರು. ಡಾ.ವಿದ್ಯಾವತಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂತೋಷ ಹೂಂಪ್ಲಿˌ ಡಾ.ಜ್ಯೋತಿ ಕೆಎಸ್ˌ ಡಾ.ಸಂತೋಷ ಕಂಬಾರˌ ಡಾ.ಸಂತೋಷ ಹೂಗಾರˌ ಡಾ.ಅಣವೀರಪ್ಪ ಬೋಳೆವಾಡˌ ಡಾ.ಪ್ರಕಾಶ ಪಾಟೀಲˌ ಡಾ.ಸುರೇಶ ಬಡಿಗೇರˌ ಡಾ.ರಾಜಕುಮಾರ ಕಟ್ಟಿಮನಿˌ ಡಾ.ಮಾಳಪ್ಪ ದಂಡಗುಂಡ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here