ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಅಣ್ಣಾ ಬಾವೂ ಸಾಟೇ ಸೋಶಿಯಲ್ ಜಸ್ಟೀಸ್ ಸ್ಟೇಟ್ ಕಮೀಟಿ ಜಿಲ್ಲಾ ಸಮಿತಿ ವತಿಯಿಂದ ಅಣ್ಣಾ ಬಾವೂ ಸಾಟೇ ಅವರ 104ನೇ ಜಯಂತ್ಯೋತ್ಸವ ಆಚರಿಸಿ ನಂತರ ಬಡವರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷ ನಾಗರಾಜ ಗುಂಡಗುರ್ತಿ, ಜಿಲ್ಲಾಧ್ಯಕ್ಷ ಗುರು ಎಸ್. ಮಾಳಗೆ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಖ್ಯಾತ ನ್ಯಾಯವಾದಿಗಳು ಮತ್ತು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ, ಕಾಂಗ್ರೆಸ್ ಮುಖಂಡ ಶಾಮ ನಾಟೀಕಾರ, ಶರಣು ಪಾಟೀಲ, ಪರಮೇಶ್ವರ ಖಾನಾಪೂರ, ಲಿಂಗರಾಜ ತಾರಫೈಲ್, ಸಚೀನ ಶಿರವಾಳ, ಅಮರ ಶಿರವಾಳ, ಮಾದಿಗ ಸಮಾಜದ ಮುಖಂಡ ದಶರಥ ಕಲಗುರ್ತಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಭೀಮ ಆರ್ಮಿ ರಾಜ್ಯಾಧ್ಯಕ್ಷ ಸಂತೋಷ ಪಾಳಾ, ಮುಖಂಡರಾದ ಅರವಿಂದ ಕಮಲಾಪೂರಕರ್, ರವಿಕುಮಾರ ಹೋಸಮನಿ, ಪ್ರಕಾಶ ಮಾಳಗೆ, ಶ್ರೀಕಾಂತ ರೆಡ್ಡಿ, ಉದಯ ಖಣಗೆ, ಶತೀಶ ಮಾಲೆ, ಪಂಚಶೀಲ ಚಾಂಬಾಳ, ರೋಶನ ಗುಂಡಗುರ್ತಿ, ದಿಗಂಬರ್ ಗೋಂಡದಗಿ, ಗೀತಾ ವಾಡೇಕಾರ, ದತ್ತು ಹೈಯಾಳಕರ್, ಬಂಡೇಶ ರತ್ನಡಗಿ, ಹಣಮಂತ ರತ್ನಡಗಿ, ಶಿವುಕುಮಾರ ಸೇರಿದಂತೆ ಇತರರು ಇದ್ದರು.