ಮಹಾದೇವಪ್ಪ ರಾಂಪೂರೇ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಪಿತಾಮಹ; ಶಶೀಲ ನಮೋಶಿ

0
24

ಕಲಬುರಗಿ: ರಾಂಪೂರೇ ಅವರು ಒಬ್ಬ ದೂರದೃಷ್ಟಿಯುಳ್ಳ ನಾಯಕರಾಗಿದ್ದರು ಹಾಗೂ ಅವರಲ್ಲಿ ಒರ್ವ ಸಮಾಜವಾದಿಯು ಆಗಿದ್ದರು ನಾನು ನಿಜವಾಗಿಯು ಈ ಸಂಸ್ಥೆಯ ವಿದ್ಯಾರ್ಥಿಯಾಗಿರುವದು ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ.ನಮೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂಗೈಕ್ಯ ಮಹಾದೇವಪ್ಪ ರಾಂಪುರೇ ಅವರ 103ನೇ ಜನ್ಮದಿನೋತ್ಸವ ಹಾಗೂ ನಿವೃತ್ತ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ವರ್ಗದ ವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರ ಪರವಾಗಿ ಅವಿನಾಶ ಸಾಮ್ರಾಣಿ ಅವರು ಆಡಳಿತ ಮಂಡಳಿಯ ನಿವೃತ್ತ ನೌಕರರನ್ನು ಗೌರವಿಸುವ ಈ ವಿನೂತನ ಸಂಪ್ರದಾಯ ಶ್ಲಾಘನೀಯ ಎಂದು ಈ ಸನ್ಮಾನ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದೆ ಎಂದರು.

Contact Your\'s Advertisement; 9902492681

ಅಂದಿನ ಕಾಲದಲ್ಲಿ ಈ ಭಾಗದಲ್ಲಿ ದಾನಿಗಳ ನೆರವಿನಿಂದ ವೈದ್ಯಕೀಯ,ಇಂಜಿನಿಯರಿಂಗ ಮೊದಲಾದ ಶೈಕ್ಚಣಿಕ ಸಂಸ್ಥೆಗಳನ್ನು ಸ್ಥಾಪಿಸಿರುವುದು ಅವರ ಕಾರ್ಯವೈಕರಿಗೆ ಒಂದು ಸಾಕ್ಚಿ ಎಂದರು.

ಮುಂದುವರೇದು ಮಾತನಾಡಿದ ಅವರು ಅಂತಹ ಸಂಧರ್ಬದಲ್ಲಿ ಬೆಂಗಳೂರಿನ ಹೃದಯಭಾಗದ ಸದಾಶಿವ ನಗರದಲ್ಲಿ ಸಂಸ್ಥೆಗೆ ಸರಕಾರದಿಂದ ಸ್ಥಳ ದೊರಕಿಸಿಕೊಟ್ಟಿರುವದು ಸಣ್ಣ ಮಾತಲ್ಲ ಎಂದರು ಇಂದು ಅಲ್ಲಿ ಅದ್ಬುತವಾದ ಎನ್.ಪಿ.ಎಸ್ ಶಾಲೆ ಪ್ರಾರಂಭಿಸಿದ್ದೆವೆ ಎಂದರು.

ಇಂದು ಗುಣಮಟ್ಟದ ಶಿಕ್ಚಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಸಂಸ್ಥೆಯ ಎಲ್ಲಾ ನೌಕರರು ತಮ್ಮ ಜವಾಬ್ದಾರಿ ಅರಿತು ಹಿಂದಿನವರಿಗಿಂತಲೂ ಪ್ರಭಾವಯುತವಾಗಿ ಬೋಧನೆಯಲ್ಲಿ ತೊಡಗಿಸಿಕೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಇನ್ನೋರ್ವ ಸನ್ಮಾನಿತರಾದ ರಾಜಶೇಖರ ಉಪಾಸೆ ಅವರು ಮಾತನಾಡುತ್ತಾ ನಿವೃತ್ತರನ್ನು ಸನ್ಮಾನಿಸಿರುವುದು ಬಹಳ ಸಂತೋಷ ಉಂಟುಮಾಡಿದೆ ಸಂಸ್ಥೆ ನನಗೆ ಮಾತ್ರವಲ್ಲದೇ ನನ್ನ ಮಕ್ಕಳು ಎಲ್ಲರಿಗೂ ಶಿಕ್ಚಣ ಕೊಡುವಲ್ಲಿ ಬಹಳ ಸಂಸ್ಥೆಯ ಸಹಕಾರ ಎಂದಿಗೂ ಮರೆಯುವುದಿಲ್ಲ ಎಂದರು.

ಮ್ಮ ಅವಧಿಯಲ್ಲಿ ಆರೋಗ್ಯಕ್ಕಾಗಿ ವೈಧ್ಯಕೀಯ ಹೊಸ ಸಂಸ್ಥೆಗಳನ್ನು ಪ್ರಾರಂಭಿಸೊಣ ಎಂದರು ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಶ ಪಾಟೀಲ, ಆಡಳಿತ ಮಂಡಳಿಯ ಸದಸ್ಯರಾದ ಡಾ. ಶರಣಬಸಪ್ಪ ಹರವಾಳ,ಡಾ.ಮಹಾದೇವಪ್ಪ ರಾಂಪುರೇ, ಡಾ.ಕಿರಣ್ ದೇಶಮುಖ, ಡಾ.ಅನೀಲ ಪಾಟೀಲ, ಸಾಯಿನಾಥ ಪಾಟೀಲ, ನಾಗಣ್ಣ ಘಂಟಿ,ಡಾ.ಶಿವಾನಂದ ಮೇಳಕುಂದಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಉಮಾ ರೇವೂರ ನಮ್ರತಾ ಹವಾ ಹಾಗೂ ಕವಿತಾ ಎಮ್ ಅವರು ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಅವರು ಸರ್ವರನ್ನು ಸ್ವಾಗತಿಸಿದರು. ಜಂಟಿಕಾರ್ಯದರ್ಶಿಗಳಾದ ಡಾ.ಕೈಲಾಶ ಪಾಟೀಲ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಸಿ.ಸಿ.ಪಾಟೀಲ,ವಿಶೇಷ ಅಧಿಕಾರಿ ಡಾ.ಪರಮೇಶ ಬಿರಾದಾರ ಹಾಗೂ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here