ಕಲಬುರಗಿ: ಸುಪ್ರೀಂಕೋರ್ಟಿನ ಏಳು ಸದಸ್ಯರ ಪೀಠ ಪರಿಶಿಷ್ಟರ ಒಳ ಮೀಸಲಾತಿಯನ್ನು ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ಆದೇಶ ಮಾಡಲಾಗಿದ್ದು ಆದ್ದರಿಂದ ಕಲಬುರಗಿ ಜಿಲ್ಲೆ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿರುವ ಡಾ. ಬಾಬು ಜಗಜೀವನ ರಾಮ ಅವರ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಶರಥ ಕಲಗುರ್ತಿ, ಶಾಮ ನಾಟೀಕಾರ, ಲಿಂಗರಾಜ ತಾರಫೈಲ್, ರಾಜು ಕಟ್ಟಿಮನಿ, ರಮೇಶ್ ವಾಡೆಕರ್, ಹನುಮಂತ ಅಂಕಲಗಿ, ಶ್ರೀನಿವಾಸ್ ರಾಮನಳಕರ್, ಸಿದ್ದಲಿಂಗ ಕಟ್ಟಿಮನಿ, ಚಂದ್ರಕಾಂತ್ ನಾಟಿಕರ್, ಸುರೇಶ್ ತಾರಫೆಲ, ಮಲ್ಲಿಕಾರ್ಜುನ್ ಜಿನಕೆರಿ, ಮಹೇಶ್ ಮೂಲಿಮನಿ, ಅನಿಲ್ ಬೆಳಕೇರಿ, ರಮಾಕಂತ ಪೂಜಾರಿ, ರವಿ ಸಿಂಗೆ, ಗುಂಡು ಸಂಗವರ್, ಗಿರೀಶ್ ನಾಟಿಕರ್, ರಂಜಿತ್ ಮೂಲಿಮನಿ, ಮಲ್ಲಿಕಾರ್ಜುನ್ ದೊಡ್ಡಮನಿ ಸೇರಿದಂತೆ ಇನ್ನಿತರರು ಭಾಗವಹಿಸಿದರು.